ಪತ್ರಲೇಖ

Author : ಕೆ. ಆರ್‌. ಸಂಧ್ಯಾರೆಡ್ಡಿ

Pages 176

₹ 150.00




Year of Publication: 2023
Published by: ಸಮಯ ಪ್ರಕಾಶನ
Address: ನಂ-1044, 4ನೇ ಮುಖ್ಯರಸ್ತೆ, 8ನೇ ಕ್ರಾಸ್, ಶ್ರೀನಿವಾಸನಗರ, ಬೆಂಗಳೂರು- 560050
Phone: 9242216138

Synopsys

‘ಪತ್ರಲೇಖ’ ಸಂಧ್ಯಾರೆಡ್ಡಿ ಕೆ.ಆರ್ ಅವರ ಮಹತ್ವದ ಪತ್ರಗಳ ಸಂಕಲನ. ಈ ಸಂಕಲನದ ಕುರಿತು ವಿವರಿಸುತ್ತಾ ‘ಸುಮಾರು ನಲವತ್ತು ವರ್ಷಗಳಿಂದ ನಾನು ಕಾಪಾಡಿಕೊಂಡು ಬಂದಿದ್ದ ಒಂದಿಷ್ಟು ಪತ್ರಗಳ ಸಂಗ್ರಹವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಪತ್ರ ಬರವಣಿಗೆ ಎಂದರೆ ಏನು ಎಂಬುದನ್ನು ವಿವರಿಸಿದರೂ ತಿಳಿಯದಿರುವಂತಹ ಕಾಲಘಟ್ಟದಲ್ಲಿ ನಾವಿರುವಾಗ ನನ್ನಂತಹ ಸಮಾನ ವಯಸ್ಸಿನವರಿಗೆ, ಸಮಾನ ಮನಸ್ಕರಿಗೆ ಇವುಗಳನ್ನು ಓದಿದಾಗ ಮನಸ್ಸು ಹಗುರಾಗಬಹುದು, ಕಳೆದ ದಿನಗಳ ನೆನಪು ಹಸಿರಾಗಬಹುದು’ ಎಂದಿದ್ದಾರೆ ಸಂಧ್ಯಾರೆಡ್ಡಿ ಕೆ.ಆರ್.. ಇಲ್ಲಿನ ಪತ್ರಗಳನ್ನು ವಿಷಯಾನುಗುಣವಾಗಿ ಸ್ಥೂಲವಾಗಿ ವಿಂಗಡಿಸಿದ್ದೇನೆ. ಕೆಲವೊಂದು ಪತ್ರಗಳನ್ನು ಅವರವರ ಹೆಸರಿನೊಂದಿಗೆ, ಕೆಲವನ್ನು ಹಸಿರು ರಹಿತವಾಗಿ ಕೊಟ್ಟಿದ್ದೇನೆ. ಎಲ್ಲಿ ಹೆಸರಿನ ಅಗತ್ಯವಿದೆ, ಎಲ್ಲಿ ಇಲ್ಲ ಎಂಬುದು ಓದುಗರಿಗೇ ಅರ್ಥವಾಗುವುದರಿಂದ ವಿವರಿಸಲು ಹೋಗಲಾರೆ ಎಂದಿದ್ದಾರೆ.

About the Author

ಕೆ. ಆರ್‌. ಸಂಧ್ಯಾರೆಡ್ಡಿ

ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿರುವ ಕನ್ನಡಿಗರ ನೆಚ್ಚಿನ ಲೇಖಕಿ ಕೆ.ಆರ್.ಸಂಧ್ಯಾರೆಡ್ಡಿ ಅವರು ಜನಿಸಿದ್ದು 1953 ಜೂನ್  22ರಂದು ಚಿತ್ರದುರ್ಗದಲ್ಲಿ. ಎನ್‌ಜಿಇಎಫ್‌ ನಲ್ಲಿ ಉಪ ನಿರ್ವಹಕರಾಗಿ ಸೇವೆ ಸಲ್ಲಿಸಿರುವ ಅವರು ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು.  ಇವರ ಅನುವಾದಿತ ಕೃತಿಗಳೆಂದರೆ - ಬರ್ಕ್ ವೈಟ್‌ ಕಂಡ ಭಾರತ, Half way to Freedom, ಆಸನ ಪ್ರಾಣಾಯಾಮ ಮುದ್ರಾಬಂಧ, ನೆಹರೂವಾದದ ಹುಟ್ಟು ಮತ್ತು ಬೆಳವಣಿಗೆ, ಉಗ್ರಾಣ ನಿರ್ವಹಣೆ, ಸೃಜನಶೀಲ ಪ್ರತಿಭೆ, ದೇಹದ ರಚನಾ ವ್ಯವಸ್ಥೆಗಳು, ಹೊಸ ಬಗೆಯ ಶಕ್ತಿ ವ್ಯವಸ್ಥೆಗಳು.  ಸಂಪಾದಿತ ಕೃತಿಗಳು : ಗ್ರಾಮೀಣ ಪಶುಸಾಕಣೆ, ಗ್ರಾಮೀಣ ...

READ MORE

Related Books