ದೇಶ ಕಂಡಂತಹ ಅಪ್ರತಿಮ ನಾಯಕ, ದಾರ್ಶನಿಕ ಮತ್ತು ಅಹಿಂಸಾ ತತ್ವ ಪ್ರತಿಪಾದಕ ಮಹಾತ್ಮಾ ಗಾಂಧಿ ಕುರಿತಾಗಿ ಬರೆದಂತಹ ಪುಸ್ತಕವಿದು. ವಿಶ್ವ ಮಾನ್ಯರ ಜೀವನ ಚರಿತ್ರೆ ಮಾಲೆಯಲ್ಲಿ ಕಾಣ ಸಿಗುವಂತಹ ಈ ಪಸ್ತಕದಲ್ಲಿ ಗಾಂಧಿ ತತ್ವಗಳನ್ನು ಸಾಮಾನ್ಯರೂ ತಿಳಿದುಕೊಳ್ಳುವಂತೆ ಮತ್ತು ಅರ್ಥೈಸಿಕೊಳ್ಳಲು ಸುಲಭವಾಗುವ ರೀತಿಯಲ್ಲಿ ನಿರೂಪಿಸಿದ್ದಾರೆ ಲೇಖಕರು. ಮೋಹನದಾಸ ಕರಮಚಂದ ಗಾಂಧಿ ಅವರು ತಮ್ಮ ಜೀವನದಲ್ಲಿ ಪ್ರತಿಪಾದಿಸಿದ ತತ್ವಗಳಾದ ಸತ್ಯ ಮತ್ತು ಅಹಿಂಸೆಗಳನ್ನು ಯಾವ ರೀತಿ ಬದುಕಿ ತೋರಿಸಿದರು ಎಂಬುದನ್ನು ಈ ಪುಸ್ತಕವು ವಿವರಿಸುತ್ತದೆ. ಆಸ್ಪೃಶ್ಯತೆಯನ್ನು ಹೋಗಲಾಡಿಸಲು ಭಾರತದ ಕೆಳವರ್ಗದವರನ್ನು ‘ಹರಿಜನ’ ಎಂದು ಕರೆದು ಉನ್ನತ ಸ್ಥಾನವನ್ನು ನೀಡಿದರು. ಅಪ್ಪಟ ಸಸ್ಯಾಹಾರವನ್ನು ಪ್ರಚಾರ ಮಾಡಿದ ಗಾಂಧೀಜಿ ಉಪವಾಸ ಹಾಗೂ ಮೌನದ ಮಹತ್ವವನ್ನು ಸಾರಿದರು. ಭಾರತೀಯರು ಗಾಂಧಿಯನ್ನು ‘ಬಾಪು’ ಎಂದು, ‘ರಾಷ್ಟ್ರಪಿತ’ ಎಂದು ಕರೆದರು. ಈ ಪುಸ್ತಕದಲ್ಲಿ ಮಹಾತ್ಮ ಗಾಂಧಿಯನ್ನು ಲೇಖಕರು ಸೊಗಸಾಗಿ ಪರಿಚಯ ಮಾಡಿಕೊಟ್ಟಿದ್ದಾರೆ. ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ತತ್ವ ಸಿದ್ಧಾಂತಗಳ ಪರಿಚಯ ಈ ಪುಸ್ತಕದಲ್ಲಿ ಅಡಕವಾಗಿದೆ.
©2024 Book Brahma Private Limited.