ಬಿ.ಜಿ.ಎಲ್. ಸ್ವಾಮಿ ಅವರ ಕುರಿತು ಲೇಖಕ ಟಿ.ಜಿ. ಶ್ರೀನಿಧಿ ಅವರು ಬರೆದ ಕೃತಿ ಇದು. ಬಿ.ಜಿ.ಎಲ್. ಸ್ವಾಮಿ ಅವರ ‘ಹಸುರು ಹೊನ್ನು‘ ವಿಜ್ಞಾನ ಪ್ರವಾಸೋದ್ಯಮ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಈವರೆಗೂ ಇಂತಹ ಪ್ರಶಸ್ತಿಗೆ ಭಾಜನರಾದ ಲೇಖಕರು ಎಂದರೆ ಬಿಜಿಎಲ್ ಸ್ವಾಮಿ. ಕನ್ನಡದ ಮಟ್ಟಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಪ್ರಥಮ ತಂದೆ ಮಕ್ಕಳ ಜೋಡಿ. ಸ್ವಾಮಿಯವರ ವಿಜ್ಞಾನ ಬರಹಗಳ ಹಾಗೆ ಅವರ ಸಾಹಿತ್ಯ ಬರಹಗಳೂ ಪ್ರಸಿದ್ಧ. ತಮಿಳು ಭಾಷೆಯ ಪ್ರಾಚೀನತೆಯ ‘ಕುಮರಿಕಾಂಡಂ‘ ಕಥೆ ಕಟ್ಟುವ ಇರಾವಂತಂ ಮಹಾದೇವನ್ ಹಾಗೂ ನೀಲಕಂಠ ಶಾಸ್ತ್ರಿಗಳ ವಾದವನ್ನು ಪುರಾವೆ ಸಹಿತ ಕೇವಲ ಕಲ್ಪನೆ ಎಂದು ಇಂಗ್ಲಿಷ್ ಹಾಗೂ ತಮಿಳಿನಲ್ಲಿ ಬರೆದವರು ಇವರು. ‘ಬಿ.ಜಿ.ಎಲ್. ಸ್ವಾಮಿಯವರ ಕ್ಷೇತ್ರ ಸಸ್ಯಶಾಸ್ತ್ರವಾಗಿದ್ದರೂ, ವಿಜ್ಞಾನ ಬೋಧನೆ ಅವರ ವೃತ್ತಿಯಾಗಿದ್ದರೂ, ಅವರೊಬ್ಬ ಗದ್ಯ ಲೇಖಕರಾಗಿದ್ದರೂ, ಅವರಲ್ಲೊಬ್ಬ ಕವಿಯಿದ್ದ‘ ಎನ್ನುವ ಹಾ.ಮಾ. ನಾಯಕರ ಮಾತು ಉತ್ಪ್ರೇಕ್ಷೇಯಲ್ಲ. ಇಂತಹ ಲೇಖಕರ ಬದುಕು-ಬರೆಹದ ಪಕ್ಷಿನೋಟ ನೀಡುವ ಕೃತಿ. ಸಾಹಿತಿ ನಾ. ಸೋಮೇಶ್ವರ ಸಂಪಾದಿಸಿದ್ದಾರೆ.
©2024 Book Brahma Private Limited.