‘ಪಕ್ಷಿಗಳ ವಿಸ್ಮಯ ವಿಶ್ವ’ ಶ್ರೀಧರ ತುಮರಿ ಅವರ ಕೃತಿಯಾಗಿದೆ. ಕರ್ನಾಟಕದಲ್ಲಿ ಕಾಣಸಿಗುವ ಬಹುತೇಕ ಎಲ್ಲ ಪಕ್ಷಿಗಳ ಸಂಕ್ಷಿಪ್ತ, ಸಮಗ್ರ ಪರಿಚಯ ನೀಡುವ ಬಹುವರ್ಣದ ಕೃತಿ ಇದು. ಪರಿಸರದ ಬಗ್ಗೆ ವಿಶೇಷ ಕಾಳಜಿ ಇದ್ದು, ಫೋಟೋಗ್ರಫಿ ಮತ್ತು ಅಂಕಣ ಬರಹಗಳಲ್ಲಿ ತೊಡಗಿಕೊಂಡಿರುವ ಶ್ರೀಧರ ತುಮರಿ ಇದರ ಲೇಖಕರು. ಅಂತರರಾಷ್ಟ್ರೀಯ ಖ್ಯಾತಿಯ ಪಕ್ಷಿ ವೀಕ್ಷಕ ಮತ್ತು ಫೋಟೋಗ್ರಾಫರ್ ಆಗಿರುವ ಕ್ಲೆಮೆಂಟ್ ಎಂ. ಫ್ರಾನ್ಸಿಸ್ ಅವರು ತೆಗೆದಿರುವ ಅತ್ಯಾಕರ್ಷಕ ಫೋಟೋಗಳು ಈ ಪುಸ್ತಕದಲ್ಲಿವೆ.
©2025 Book Brahma Private Limited.