ಶ್ರೀಧರ ತುಮರಿ ಮೂಲತಃ ಮಲೆನಾಡಿನವರು. ವ್ಯವಸಾಯ ಅವರ ವೃತ್ತಿ. ಹವ್ಯಾಸಿ ಛಾಯಾಚಿತ್ರಗಾರರೂ ಹೌದು. ಅವರು ಪರಿಸರ ಕಾಳಜಿಯ ಕುರಿತು ಬರೆದಿರುವ ಹಲವಾರು ಲೇಖನಗಳು ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಮಾಜಿ ಪ್ರಧಾನಮಂತ್ರಿ ಶ್ರೀ ಚಂದ್ರಶೇಖರ್ ಅವರು ಭಾರತ ಯಾತ್ರಾ ನಡೆಸಿದಾಗ ಹಲವು ವಿಶಿಷ್ಟವಾದ ಚಿತ್ರಗಳನ್ನು ಸೆರೆಹಿಡಿದಿದ್ದು ಅವುಗಳ ಹಲವು ಪ್ರದರ್ಶನಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಹದಿನೈದು ಚಿತ್ರಗಳನ್ನು ದೆಹಲಿಯ ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿ ಶಾಶ್ವತವಾಗಿ ಪ್ರದರ್ಶನಕ್ಕೆ ಇಡಲಾಗಿದೆ. 1985ರಲ್ಲಿ ಮಾಸ್ಕೋದಲ್ಲಿ ಇವರೇ ಸೆರೆಹಿಡಿದ ಛಾಯಾಚಿತ್ರಗಳ ಪ್ರದರ್ಶನವನ್ನು ಮಾಡಿದ್ದು, ಭಾರತದಲ್ಲಿಯೂ ಹಲವಾರು ಛಾಯಾಚಿತ್ರ ಪ್ರದರ್ಶನಗಳನ್ನು ಮಾಡಿದ್ದಾರೆ. CHANDRASHEKAR BHARATHYATHRA- A Bird’s Eye View of a New Vision For India ಎಂಬ ಇಂಗ್ಲಿಷ್ ಪುಸ್ತಕವನ್ನುಪ್ರಕಟಿಸಿದ್ದಾರೆ.