‘ಅಭಿಮನ್ಯು ದಿ ಗ್ರೇಟ್ ’ ಐತಿಚಂಡ ರಮೇಶ ಉತ್ತಪ್ಪ ಅವರ ಲೇಖನಗಳ ಸಂಕಲನ. ಈ ಕೃತಿಯಲ್ಲಿ ಒಂದು ಸಾಕಾನೆ ಜನರ ಮೇಲೆ ಇಷ್ಟೊಂದು ಪ್ರಭಾವ ಬೀರಲು ಸಾಧ್ಯವೇ ಅನ್ನುವಂತಹ ವಿಚಾರ ಪ್ರಸ್ತಾಪನೆ ಆಗುತ್ತದೆ. ಮಕ್ಕಳಿಂದ ಹಿರಿಯರ ತನಕ ಅಭಿಮನ್ಯುವಿನ ಮೇಲೆ ಇದ್ದಂತಹ ಪ್ರೀತಿಯನ್ನು ಇಲ್ಲಿ ಲೇಖಕರು ಪ್ರಸ್ತಾಪಿಸುತ್ತಾರೆ. ಹುಲಿ ಸೆರೆ ಕಾರ್ಯಚರಣೆಯಲ್ಲಿಯೂ ಈತನ ಧೈರ್ಯಕ್ಕೆ ಸರಿಸಾಟಿ ಇಲ್ಲ. ಕಾರ್ಯಾಚರಣೆಯ ವೇಳೆ ಇತರ ಆನೆಗಳು ಹುಲಿ ವಾಸನೆ ಬರುತ್ತಿದ್ದಂತೆ ಮುಂದೆ ಹೋಗಲು ಅಂಜುತ್ತವೆ. ಆದರೆ, ಅಭಿಮನ್ಯು, ಹುಲಿ ವಾಸನೆಯನ್ನು ಹುಡುಕಿಕೊಂಡು ಹೋಗುತ್ತದೆ. ಅಭಿಮನ್ಯು ತನ್ನ ಜೊತೆ ಇದ್ದ ಮಾವುತನನ್ನು ರಕ್ಷಿಸುವ ಘಟನೆಯು ಇಲ್ಲಿ ಬಿಂಬಿತವಾಗಿದೆ. ಆನೆಯ ವರ್ತನೆಗಳನ್ನು ಅಧ್ಯಯನ ಮಾಡಲು ಪೂರಕ ಸಾಮಗ್ರಿ ಈ ಕೃತಿಯಲ್ಲಿದೆ.
©2024 Book Brahma Private Limited.