ಜಾನುವಾರುಗಳಿಗೆ ತಗುಲುವ ರೋಗಕ್ಕೆ ಒಗ್ಗರಣೆ ಡಬ್ಬಿಯಲ್ಲೇ ಮದ್ದು ತೋರಿಸುವ ಪ್ರಯತ್ನವೇ ಡಾ.ಗಣೇಶ ಹೆಗಡೆ ನೀಲೇಸರ ಅವರ ಕೃತಿ 'ಒಗ್ಗರಣೆ ಡಬ್ಬಿಯಲ್ಲಿ ಪಶು ಆರೋಗ್ಯ '. ಜಾನುವಾರುಗಳಿಗೆ ಬರುವ ಸಾಮಾನ್ಯ ರೋಗಕ್ಕೂ ಮಾತ್ರೆ, ಚುಚ್ಚುಮದ್ದು ಅವಲಂಬಿಸಬೇಕಾದ ಸ್ಥಿತಿಯಿದೆ. ಹೀಗಾಗಿ ಇಂದು ಸುಲಭ ಹಾಗೂ ಕಡಿಮೆ ಖರ್ಚಿನಲ್ಲಿ ದೊರೆಯುವ ಗಿಡಮೂಲಿಕೆ ಪದ್ಧತಿ ಮರೆಯಾಗಿದೆ. ಇಂಥ ಜನಪದ ವೈದ್ಯ ಪದ್ಧತಿಯನ್ನು ಉಳಿಸುವ ಹಾಗೂ ಅಮೂಲ್ಯ ಸಸ್ಯ ಸಂಪತ್ತಿನ ಮಹತ್ವ ತಿಳಿಸುವ ಪ್ರಯತ್ನವನ್ನು ಈ ಕೃತಿಯ ಮೂಲಕ ಮಾಡಲಾಗಿದೆ. ಜಾನುವಾರುಗಳಿಗೆ ಬರುವ ಹಲವು ರೋಗಗಳ ನಿವಾರಣೆಗೆ ನಾಲ್ಕಾರು ಚಿಕಿತ್ಸಾ ವಿಧಾನಗಳ ಮಾಹಿತಿಯಿದೆ. ಔಷಧ ಕ್ರಮಗಳನ್ನು ಪರಿಚಯಿಸುತ್ತ ರೈತರು ವಹಿಸಬೇಕಾದ ಎಚ್ಚರಿಕೆ ಕ್ರಮಗಳನ್ನೂ ಉಲ್ಲೇಖಿಸಲಾಗಿದೆ.
©2025 Book Brahma Private Limited.