ಈ ಕೃತಿಯನ್ನು ಓದಿದ ಕೂಡಲೇ ಪ್ರಕಾಶಕರಿಂದ ಲೇಖಕರ ವಿಳಾಸ ಪಡೆದು ಪುಸ್ತಕದ ಓದಿನಿಂದ ನನಗಾಗಿರುವ ಸಂತೋಷವನ್ನು ಬರೆದು ಲೇಖಕರಿಗೆ ತಿಳಿಸಿದೆ. . ರಮಾನಂದ ಅವರು ನನಗೆ ಆಪ್ತ ಮಿತ್ರರಾದರು. ಅಂದಿನಿಂದ ಅವರು ಏನನ್ನಾದರೂ ಬರೆದರೆ ನನಗೆ ಕಳುಹಿಸಿ ಕೊಡುವುದು, ನಾನು ಅದನ್ನು ಓದಿ ಪ್ರತಿಕ್ರಿಯೆ ಕೊಡುವುದು ನಡೆಯುತ್ತಾ ಬಂದಿದೆ. ಎಷ್ಟೋ ಸಲ ನಾವು ಪರಸ್ಪರ ಭೇಟಿಯಾಗಿದ್ದೇವೆ. ಕರ್ನಾಟಕದ ನಾನಾ ಭಾಗದಲ್ಲಿ ಪಶುವೈದ್ಯರಾಗಿ ಕೆಲಸ ಮಾಡುತ್ತಾ ಅವರು ಪಡೆದಿರುವ ಅನುಭವವನ್ನು ನನ್ನೊಡನೆ ಹಂಚಿಕೊಂಡಿದ್ದಾರೆ. ಈಚೆಗೆ ಅವರು ಕರ್ನಾಟಕದ ಮಠ ಮತ್ತು ಗುಡಿಗಳಲ್ಲಿರುವ ಆನೆಗಳ ಆರೋಗ್ಯವನ್ನು ತಪಾಸಣೆ ಮಾಡುತ್ತ ಹೊಸಪೇಟೆಯ ನನ್ನ ಮನೆಗೂ ಬಂದರು. ಅವರು ಮಾಡಿರುವ ತಿರುಗಾಟ ಕಂಡು ಅಸೂಯೆ ಆಗುತ್ತದೆ. ಈ ವಯಸ್ಸಿನಲ್ಲಿಯೂ ಅವರು ಮಾಡುತ್ತಿರುವ ತಿರುಗಾಟ ಕಂಡು ವಿಸ್ಮಯ ಆಗುತ್ತದೆ. ಅಂತೂ ಅವರ ಬರೆಹದ ಅಭಿಮಾನಿ ನಾನು- ರೆಹಮತ್ ತರಿಕೆರೆ
©2024 Book Brahma Private Limited.