‘ಹಾವು’ ಐತಿಚಂಡ ರಮೇಶ್ ಉತ್ತಪ್ಪನವರ ( ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ) ಕೃತಿಯಾಗಿದೆ. ಇದಕ್ಕೆ ವಿಶ್ವೇಶ್ವರ ಭಟ್ ಅವರ ಬೆನ್ನುಡಿ ಬರಹವಿದೆ; ಹಾವಿನ ಕುರಿತ ಈ ಪುಸ್ತಕ ಚಿಕ್ಕದಾದರೂ ವಿಷಯದ ಹರವು ಗಾಢವಾಗಿದೆ. ಓದುತ್ತಾ ಹೋದಂತೆ ಹಾವುಗಳ ವಿಚಾರ ನಮ್ಮ ಮನಸ್ಸನ್ನು ಸಂಪೂರ್ಣ ಆವರಿಸಿಬಿಡುತ್ತದೆ. ವಿವಿಧ ತಳಿಯ ಹಾವುಗಳು, ಅವುಗಳ ಗುಣ-ಸ್ವಭಾವ ನಮ್ಮಲ್ಲಿ ತುಂಬಿಕೊಂಡು ಹಾವುಗಳ ಬಗ್ಗೆ ನಮಗಿದ್ದ ಭಯ, ಕ್ರೂರತ್ವ ದೂರವಾಗಿ ಬಿಡುತ್ತದೆ. ಹಾವುಗಳ ಬಗ್ಗೆ ಪ್ರೀತಿ, ಕಾಳಜಿ ಬೆಳೆಯುತ್ತದೆ. 'ಹಾವುಗಳಿಗೆ ನಾವು ತೊಂದರೆ ಕೊಡದೆ ಅವು ನಮಗೆ ಏನೂ ಮಾಡುವುದಿಲ್ಲ' ಎಂಬ ಅರಿವು ಮೂಡುತ್ತದೆ. ನನಗೆ ತಿಳಿದಂತೆ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ, ಹಾವಿನ ಬಗ್ಗೆ ಕನ್ನಡದಲ್ಲಿ ಬಂದ ವಿಶಿಷ್ಟ-ವಿಭಿನ್ನ, ಅಪರೂಪದ ಪುಸ್ತಕ ಇದಾಗಿದೆ. ಗಾತ್ರದಲ್ಲಿ ಚಿಕ್ಕದಾದರೂ ಹಾವಿನ ಬಗ್ಗೆ ಪಿಎಚ್.ಡಿ ಗ್ರಂಥ ಬರೆಯುವಷ್ಟು ವಿಷಯ ಸಾಮಗ್ರಿ ಇಲ್ಲಿದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
©2025 Book Brahma Private Limited.