`ದುರ್ಗದ ಹುಲಿ ಶಿಕಾರಿ' ಎಂ ಮೃತ್ಯುಂಜಯಪ್ಪ ಅವರ ಕೃತಿಯಾಗಿದೆ. ಪ್ರಕೃತಿಯೊಂದಿಗೆ ತಾದ್ಯಾತ್ಮ ಬೆಳೆಸಿಕೊಂಡ ಚಾರಣ ಪ್ರಿಯ,ಇತಿಹಾಸ ಪ್ರೇಮಿ, ಸಾಹಿತ್ಯಾಸಕ್ತ, ಮಾಗಿದ ಹಿರಿಯ ಜೀವ, ಎಪ್ಪತ್ತೇಳರಲ್ಲೂ ಲವಲವಿಕೆ, ಕುಂದದ ಉತ್ದಾಹ, ಹೊಸತರ ಬಗ್ಗೆ ತುಡಿತ , ವರ್ತಮಾನದ ಬಗ್ಗೆ ಸ್ಪಂದಿಸುವ ಜೀವನ್ಮಖಿ! ಚಿತ್ರದುರ್ಗದ ಪ್ರಖ್ಯಾತ ಕಾದಂಬರಿಕಾರರಾದ ತರಾಸು ಮತ್ತು ಬಿ ಎಲ್ ವೇಣು ಅವರ ಒಡನಾಡಿಗಳೂ ಹೌದು. ತಮ್ಮ ಮೊದಲ ಪುಸ್ತಕಕ್ಕಾಗಿ ಈ ಸಂಧ್ಯಾ ವಯಸ್ಸಿನಲ್ಲೂ ಹುಲಿ ಬೇಟೆಕಾರರ ಬಗ್ಗೆ ಮಾಹಿತಿ ಸಂಗ್ರಹಿಸಲು ಅವರು ಪಟ್ಟ ಶ್ರಮವೇ ಮತ್ತೊಂದು ಪುಸ್ತಕವಾದೀತು. ಮಧ್ಯ ಕರ್ನಾಟಕದ ಚಿತ್ರದುರ್ಗ ಸುಡು ಬೇಸಿಗೆಯ ಬೆಂಗಾಡು. ಕೊರಕಲು- ಕಂದಕ, ಅಗಳು, ಬೆಟ್ಟ, ಗುಡ್ಡ, ಬಂಡೆಗಳ ನಡುವೆ ಕೋಟೆ- ಕೊತ್ತಲ ಕಟ್ಟಿ , ಕೆರೆ- ತಟಾಕಗಳನ್ನು ನಿರ್ಮಿಸಿ ಅರಸೊತ್ತಿಗೆಯನ್ನು ಕದಂಬರು, ಶಾತವಾಹನರು ಮತ್ತು ಪಾಳೆಯಗಾರರು ನಿಭಾಯಿಸಿದರು. ಚಿತ್ರದುರ್ಗದ ಚಂದ್ರವಳ್ಳಿ, ಜೋಗಿಮಟ್ಟಿ (ಮರಡಿ),ಆಡು ಮಲ್ಲೇಶ್ವರದ ಕಾಡು ಪ್ರದೇಶಗಳ ನಡುವೆ ಒಂದಿಷ್ಟು ತಂಪು ಗಾಳಿ ಬೀಸಿ ಮೈ , ಮನಸು ಪ್ರಫ಼ುಲ್ಲವಾಗುತ್ತದೆ.ಆದರೆ ಈ ಬೆಟ್ಟ- ಕಾಡು ಪ್ರದೇಶಗಳು ಕ್ರೂರ ಮೃಗಗಳ ವಸತಿ ಸ್ಥಳಗಳೂ ಹೌದು! ಹುಲಿ, ಚಿರತೆ, ಕರಡಿಗಳಂತೂ ಇಲ್ಲಿ ಮಾಮೂಲು! ರಮಣೀಯ ಸೌಂದರ್ಯದಲ್ಲೂ ರೌದ್ರತೆಯೂ ಇದ್ದದ್ದೇ!
©2024 Book Brahma Private Limited.