ಡಾ.ಎಸ್. ಬಾಲಚಂದ್ರರಾವ್ ಅವರು ಬರೆದ ಕೃತಿ-ಭಾಸ್ಕರಾಚಾರ್ಯ ವಿರಚಿತ ಲೀಲಾವತಿ (108 ಆಯ್ದ ಲೆಕ್ಕಗಳು). ಗಣಿತ ಜ್ಞಾನಶಾಸ್ತ್ರದಲ್ಲಿ ಭಾರತವು ವಿಶ್ವಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಗಣಿತ ಮತ್ತು ಖಗೋಳ ಶಾಸ್ತ್ರದಲ್ಲಿ ಪರಿಣಿತಿ ಪಡೆದಿದ್ದ (11ನೇ ಶತಮಾನ) ಭಾಸ್ಕರಾಚಾರ್ಯನು ಕರ್ನಾಟಕದ ವಿಜಯಪುರ ಜಿಲ್ಲೆಯ ಬಿಜ್ಜರಬೀಡು ಗ್ರಾಮದವನು. ಈತ ವರಾಹಮಿಹಿರ ಹಾಗೂ ಬ್ರಹ್ಮಗುಪ್ತರ ಗಣಿತ ಸಂಪ್ರದಾಯವನ್ನು ಮುಂದುವರಿಸಿದನು. ದಶಮಾನ ಪದ್ಧತಿ ಹಾಗೂ ಬೀಜಗಣಿತದಲ್ಲಿ ಅಕ್ಷರ ಪದ್ಧತಿಯನ್ನು ಮೊದಲು ಬಳಕೆಗೆ ತಂದವರೇ ಭಾಸ್ಕರಾಚಾರ್ಯರು. ತನ್ನ ಮಗಳು ಲೀಲಾವತಿಯ ಮನರಂಜನೆಗಾಗಿ ಬರೆದಿದ್ದ ಎನ್ನಲಾಗಿದ್ದ ಈ ಕೃತಿಯಲ್ಲಿ ಅಧ್ಯಯನಪೂರ್ಣವಾದ ವಿವಿಧ ಪ್ರಕಾರದ ಗಣಿತದ ಸೂತ್ರಗಳಿವೆ. ಗಣಿತದ ಸವಾಲುಗಳಿಗೆ ಪರಿಹಾರವಾಗಿ ಅನಾವರಣಗೊಳ್ಳುವ ಹೊಳವುಗಳಿವೆ ಎಂದು ಇಂದಿಗೂ ಪ್ರಶಂಸಿಸಲಾಗುತ್ತಿದೆ. ಇಂತಹ ಮಾಹಿತಿಯ ಕೃತಿ ಭಾಸ್ಕರಾಚಾರ್ಯ ವಿರಚಿತ ಲೀಲಾವತಿ.
©2024 Book Brahma Private Limited.