‘ಮಾಯಾಚೌಕಗಳ ಮಾಯಾ ಪ್ರಪಂಚ’ ಎಂಬುದು ಲೇಖಕ ಬಿ.ಕೆ. ವಿಶ್ವನಾಥರಾವ್ ಅವರು ರಚಿಸಿದ ಕೃತಿ. ಪದಬಂಧ, ಸುಡೊಕು ಇತ್ಯಾದಿ ವ್ಯಕ್ತಿಯ ವಿಚಾರ ಸರಣಿ, ಅಂಕಿ-ಸಂಖ್ಯೆಗಳ ವ್ಯವಸ್ಥಿತ ಜ್ಞಾನ, ತಾರ್ಕಿಕ ಬುದ್ಧಿ ಇತ್ಯಾದಿಯನ್ನು ಒರೆಗೆ ಹಚ್ಚುವ ಗಣಿತ ಶಾಸ್ತ್ರದ ಭಾಗವಾಗಿಯೇ ಇರುವ ಮಾಯಾಚೌಕಗಳು, ವ್ಯಕ್ತಿಯ ಬುದ್ಧಿಮತ್ತೆಗೆ ಸವಾಲು ಹಾಕುತ್ತವೆ. ಇಂತಹ ಮಾಯಾಚೌಕಗಳು ವ್ಯಕ್ತಿಯ ತಾರ್ಕಿಕ ಶಕ್ತಿಯನ್ನು ಹೆಚ್ಚಿಸುತ್ತವೆ. ಸಮಸ್ಯೆಯನ್ನು ಬಿಡಿಸಿದಾಗ ಆನಂದ ಅನುಭವಿಸುವಂತೆ ಮಾಡುತ್ತವೆ. ಹೀಗಾಗಿ, ಸಮಸ್ಯೆಗಳನ್ನು ಸ್ವೀಕರಿಸುವುದರೊಂದಿಗೆ ಅವುಗಳನ್ನು ಪರಿಹರಿಸುವತ್ತ ತೀಕ್ಷ್ಣ ಜಾಣ್ಮೆ, ಧೈರ್ಯವನ್ನು ತೋರುವಂತೆಯೂ ಪ್ರೋತ್ಸಾಹಿಸುತ್ತವೆ. ಈ ನಿಟ್ಟಿನಲ್ಲಿ, ಪೂರಕವಾಗುವ ಮಾಯಾಚೌಕಗಳನ್ನು ಪ್ರಶ್ನೆಯಾಗಿಸಿ, ಆ ಮೂಲಕ ಉತ್ತರಗಳತ್ತ ಓದುಗರ ಮನಸ್ಸನ್ನು ಕೇಂದ್ರೀಕರಿಸುವಂತೆ ಮಾಡುತ್ತವೆ. ಪ್ರಶ್ನೆಗಳ ಮಾಯಾಚೌಕಗಳನ್ನು ಒಳಗೊಂಡ ಮಾರ್ಗದರ್ಶಿ ಕೃತಿ ಇದು.
©2025 Book Brahma Private Limited.