ವಿಜ್ಞಾನ ಲೇಖಕ ಎಸ್. ಬಾಲಚಂದ್ರರಾವ್ ಅವರು ಬರೆದ ಕೃತಿ-ಮಾಯಾಚೌಕಗಳ ರಹಸ್ಯ. ಮಕ್ಕಳಿಗೂ, ದೊಡ್ಡವರಿಗೂ ಬೌದ್ಧಿಕ ಬೆಳವಣಿಗೆಗೆ ಈ ಪೂರಕವಾಗುವ ಈ ಮಾಯಾಚೌಕಗಳು ಬಹು ಹಿಂದಿನಿಂದಲೂ ಮನರಂಜನೆಯಾಗಿಯೂ, ಬುದ್ದಿಯ ಕಸರತ್ತು ಆಗಿಯೂ ನಡೆದುಕೊಂಡು ಬಂದಿದೆ. ಈ ಮಾಯಾ ಚೌಕಗಳ ಹಿಂದೆ ಜ್ಞಾನದ ಶಿಸ್ತು ಇದೆ. ತಾರ್ಕಿಕ ಲೆಕ್ಕಾಚಾರವೂ ಇದೆ. ಕಠಿಣ ಸವಾಲುಗಳನ್ನು ಎದುರಿಸುವ ಹಾಗೂ ನಿವಾರಿಸುವ ಚಾಣಾಕ್ಷತನವೂ ಇದೆ. ಇಂತಹ ತರ್ಕಗಳ ಬಗ್ಗೆ ವಿವರ ಮಾಹಿತಿ ಇರುವ ಕೃತಿ ಇದು. ಸಂಖ್ಯಾಶಾಸ್ತ್ರವು ಅತಿ ಹೆಚ್ಚಾಗಿ ಇಲ್ಲಿ ಬಳಕೆಯಾಗುತ್ತದೆ. ಕೇವಲ ತಾರ್ಕಿಕ ಮನಸ್ಸು ಮಾತ್ರ ಇವುಗಳನ್ನು ಭೇದಿಸುತ್ತದೆ ಎಂಬುದು ವಿಶೇಷ.
©2025 Book Brahma Private Limited.