ಕತೆ-ಉಪಕತೆಗಳನ್ನು ಹೇಳುತ್ತ, ಕಾವ್ಯ-ನಾಟಕಕ್ಕೆ ಸಾಗುತ್ತಾ, ಮಗುವಿನ ಕೈಹಿಡಿದು ಹೂದೋಟದಲ್ಲಿ ಓಡಾಡಿಸಿ ನಡೆಯಲು ಕಲಿಸಿದಂತೆ ಈ ಪುಸ್ತಕ ಗಣಿತದ ಸೂತ್ರಗಳನ್ನು ಹೇಳಿಕೊಡುತ್ತದೆ.
ನೆಪೋಲಿಯನ್ ಬೋನಪಾರ್ಟೆಯ ಹೆಸರಿನಲ್ಲಿರುವ ಗಣಿತ ಪ್ರಮೇಯ, ಫೈಯ್ನ್‌ಮನ್‌ನ ಬಾಲ್ಯದಲ್ಲಿ ತಂದೆ ಹೇಳಿದ ಮಾತು, ಐನೂರು ವರ್ಷ ಕಳೆದರೂ ಪರಿಹಾರ ಕಾಣದ ಗೋಲ್ಡ್‌ಬಾಕ್‌ನ ಊಹೆ, ಅನಂತಗಳಲ್ಲೂ ಹಲವು ಬಗೆಗಳಿವೆ ಎನ್ನುವುದನ್ನು ತೋರಿಸಿ ಕೊನೆಗೆ ದಾರುಣವಾಗಿ ತೀರಿಕೊಂಡ ಕ್ಯಾಂಟರ್, ದೈಹಿಕ ಅಂಗಗಳ ಸಂಖ್ಯೆಗಳನ್ನು ಸೂಚಿಸಲು ಬಳಸುವ ಬುಡಕಟ್ಟು ಜನರ ಜ್ಞಾನ - ಹೀಗೆ ಇಲ್ಲಿಯ ವಿಷಯ ವೈವಿಧ್ಯ ಬೆರಗು ಹುಟ್ಟಿಸುತ್ತವೆ.
©2024 Book Brahma Private Limited.