ಗಣಿತ ರಸಾಯನ ಎಂಬುದು ಲೇಖಕ ಬಿ.ಕೆ. ವಿಶ್ವನಾಥರಾವ್ ಅವರು ಬರೆದ ಕೃತಿ. ಗಣಿತ ಶಾಸ್ತ್ರದಲ್ಲಿರುವ ಆಸಕ್ತಿಕರ ಸಂಗತಿಗಳನ್ನು, ಸೂತ್ರಗಳನ್ನು, ಸಮೀಕರಣಗಳನ್ನು ಅತ್ಯಂತ ಕುತೂಲಕರವಾಗಿ ವಿವರಿಸಿರುವ ಕೃತಿ ಇದು. ಚಾಣಕ್ಯ, ರಾಮಾನುಜನ್ ಸೇರಿದಂತೆ ಪ್ರಾಚೀನ ಭಾರತದ ಗಣಿತ ಶಾಸ್ತ್ರಜ್ಞರನ್ನು, ಗಣಿತಕ್ಕೆ ಸಂಬಂಧಿಸಿದ ಅವರ ತರ್ಕಗಳನ್ನು ಸಹ ಕೃತಿಯಲ್ಲಿ ಚರ್ಚಿಸಲಾಗಿದೆ. ಆದ್ದರಿಂದ, ಗಣಿತ ಶಾಸ್ತ್ರದಲ್ಲಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಪ್ರಾಥಮಿಕವಾಗಿಯೂ ಹಾಗೂ ಗಣಿತದ ಒಳನೋಟದ ಸೂಕ್ಷ್ಮತೆಗಳನ್ನು ತೆರೆದು ತೋರುವ ಕೃತಿಯಾಗಿಯೂ ಗಮನ ಸೆಳೆಯುತ್ತದೆ.
©2025 Book Brahma Private Limited.