ಹಿರಿಯ ಲೇಖಕ ಡಾ. ಎಂ.ಜಿ. ದೇಶಪಾಂಡೆ ಅವರ ಕೃತಿ-ಮಾತು ಮುತ್ತಾದಾಗ. ಅನುಭವದ ನುಡಿಗಳನ್ನು ಸಂಗ್ರಹಿಸಿದ ಕೃತಿ ಇದು. ಲೇಖಕರೇ ಹೇಳುವಂತೆ ‘ ಈ ಕೃತಿಯು ನನ್ನ ಅನುಭವಗಳ ಸಾರ .ನಾನು ಬಾಳಿನಲ್ಲಿ ಅನೇಕ ಏಳು ಬೀಳುಗಳನ್ನು ಅನುಭವಿಸಿರುವೆ. ಜೀವನದ ಅನೇಕ ತಿರುವುಗಳಲ್ಲಿ ಏನೇನೋ ಘಟಿಸಿ ಹೋಗಿವೆ . ಕಷ್ಟದಲ್ಲಿ ಕುಗ್ಗದೆ ಸುಖದಲ್ಲಿ ಹಿಗ್ಗದೆ ಬದುಕು ಎದುರಿಸುತ್ತ ಸಾಗಿರುವೆ. ಬದುಕಿನ ಪ್ರತಿಕ್ಷಣವು ಎಲ್ಲರ ಪಾಲಿಗೆ ಹೊಸತು .ಅದನ್ನು ಅನುಭವಿಸುವವರ ದೃಷ್ಟಿಕೋನದಲ್ಲಿದೆ.ಈ ನಿಟ್ಟಿನಲ್ಲಿ ಆಲೋಚಿಸಿದಾಗ ನಾವು ತ್ಯಾಗ, ನಿಸ್ವಾರ್ಥ, ನಿರಾಡಂಬರತೆ, ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ನಗುನಗುತಾ ಬಾಳಬೇಕು. ನಡೆಯುವ ಹೆಜ್ಜೆಗಳು ತಪ್ಪದಂತೆ ಇನ್ನೊಬ್ಬರಿಗೆ ನೋವಾಗದಂತೆ ಬಾಳಿದರೆ ಮನುಷ್ಯತ್ವಕ್ಕೆ ಇನ್ನಷ್ಟು ಹೆಚ್ಚಿನ ಬೆಲೆ ಬರುತ್ತದೆ. ಈ ನಿಟ್ಟಿನಲ್ಲಿ ಮಾತು ಮುತ್ತಾದಾಗ.. ಅನುಭಾವದ ನುಡಿಗಳು ಇಲ್ಲಿವೆ’ ಎಂದು ಕೃತಿಯ ಅಂತರಾಳವನ್ನು ವಿವರಿಸಿದ್ದಾರೆ. .
©2024 Book Brahma Private Limited.