ಕೆಂಡಮಲ್ಲಿಗೆ

Author : ನಾಗೇಂದ್ರ ಮಸೂತಿ

Pages 88

₹ 80.00




Published by: ಶ್ರೀ ರೇವಣಸಿದ್ದೇಶ್ಚರ್‌ ಪ್ರಕಾಶನ

Synopsys

ನಾಗೇಂದ್ರ ಮಸೂತಿ ಒಬ್ಬ ತತ್ವವಿಜ್ಞಾನಿಯ ರೀತಿಯ ವಚನಗಳನ್ನು ಬಹುಮೌಲಿಕವಾಗಿ ತೂಗಿ ಸೆರೆಹಿಡಿತು ಚಿತ್ರಿಸಿದ್ದಾರೆ. ಜೀವನದ ಕ್ಷಣಗಳು ಮತ್ತು ಹಲವಾರು ಅನುಭವಗಳನ್ನು ಲೇಖಕ ಮಸೂತಿ ಅವರು ಅಕ್ಷರ ರೂಪಕ್ಕೆ ತಂದು ಓದುಗರ ಮುಂದೆ ಇಟ್ಟಿದ್ದಾರೆ. ಶರಣರ ಅನುಭಾವ ಕ್ಷೇತ್ರದ ವಚನಗಳಲ್ಲಿ ಆಧುನಿಕ ಸ್ಷರ್ಶವನ್ನು ನೀಡಿ  ಸಂಕೀರ್ಣ ಸಂಗತಿಗಳನ್ನು ಹಿಡಿದಿಟ್ಟುವಲ್ಲಿ ಎಚ್ಚರವಹಿಸಿದ್ದಾರೆ. ಹೀಗೆ ಹಲವು ಪ್ರಮುಖ ವಿಷಯಗಳ ಬಗ್ಗೆ ಈ ಪುಸ್ತಕವು ವಿವರಗಳನ್ನು ನೀಡಿದೆ. ಮೊದಲ ವಚನ, ನನ್ನ ವಚನ, ವಚನಗಳು, ಪುಸ್ತಕ ಪಟ್ಟಿ ಹೀಗೆ ನಾಲ್ಕು ಭಾಗಗಳಾಗಿ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ನಾಗೇಂದ್ರ ಮಸೂತಿ
(20 June 1964)

ಕಲಬುರಗಿ ನಿವಾಸಿಯಾಗಿರುವ ಡಾ. ನಾಗೇಂದ್ರ ಎಸ್. ಮಸೂತಿ ಅವರು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲಬುರಗಿಯ ವಿ.ಜಿ. ಮಹಿಳಾ ಪದವಿ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ.  ಕಲಬುರ್ಗಿ ಕನ್ನಡ; ವರ್ಣನಾತ್ಮಕ ವ್ಯಾಕರಣ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿ.ವಿ. ಪಿಎಚ್.ಡಿ. ನೀಡಿದೆ. ’ಗುರುಸಿದ್ಧ’ ಅಂಕಿತದಲ್ಲಿ ಇವರು ವಚನಗಳನ್ನು ಬರೆಯುತ್ತಾರೆ. ಕಲ್ಯಾಣರಾವ ಪಾಟೀಲ್‌ ಮತ್ತು ಶಿವಶರಣಪ್ಪ ಮೋತಕಪಲ್ಲಿ ಅವರು ಮಸೂತಿ ಅವರ ಜೀವನ- ಸಾಹಿತ್ಯ ಕುರಿತ ’ನುಡಿತೋರಣ’ ಪುಸ್ತಕವನ್ನು ಸಂಪಾದಿಸಿದ್ದಾರೆ. ...

READ MORE

Related Books