ವಚನ ಚಳವಳಿಯ ಬಸವ, ಅಲ್ಲಮಪ್ರಭು, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಹೀಗೆ ನೂರಾರು ಶಿವಶರಣರು ತಮ್ಮ ಜೀವನದ ಅನುಭವಗಳನ್ನು ವಚನಗಳ ಮೂಲಕ ಇಲ್ಲಿ ಅಭಿವ್ಯಕ್ತಿಸಿದ್ದಾರೆ. ವಚನ ಚಳವಳಿಯ ಭಾಗವಾಗಿದ್ದ ಎಲ್ಲರೂ ನಮಗೆ ಪರಿಚಿತರಲ್ಲ. ನೂರಾರು ಜನರು ತೆರೆಮರೆಯಲ್ಲಿ ಉಳಿದಿದ್ದಾರೆ. ಮೌಲಿಕ ವಿಚಾರಗಳನ್ನು ಪ್ರತಿಪಾದಿಸಿದ್ದರೂ ರೆಯಲ್ಲಿ ಉಳಿದ ಅಂಗಸೋಂಕಿನ ಲಿಂಗತಂದೆ, ಉರಿಲಿಂಗಿ ಪೆದ್ದಿ, ಕಂಬದ ಮಾರಿತಂದೆ, ಡಕ್ಕೆಯ ಬೊಮ್ಮಣ್ಣ, ತುರುಗಾಹಿ ರಾಮಣ್ಣ, ನಗೆಯ ಮಾರಿತಂದೆ ಇನ್ನು ಮುಂತಾದ ಶರಣರ ವಚನಗಳು ಹಾಗೂ ಅವುಗಳ ಅರ್ಥ ವಿಶ್ಲೇಷಣೆಯನ್ನು ಈ ಕೃತಿಯಲ್ಲಿ ನೀಡಲಾಗಿದೆ.
©2025 Book Brahma Private Limited.