ವಿದ್ವಾಂಸರಾದ ಡಾ. ಕೆ. ಆರ್. ಗಣೇಶ್ ಅವರು ಸಂಪಾದಿಸಿ, ಸಂಗ್ರಹಿಸಿರುವ ’ಸರ್ವಜ್ಞನ ವಚನಗಳು’ ಕೃತಿಯು , ನೀತಿ, ಧರ್ಮ , ನಂಬುಗೆ, ಆಚರಣೆ, ಮೇಲು -ಕೀಳು ಮುಂತಾದ ಹತ್ತಾರು ಸಂಗತಿಗಳಿಗೆ ಜೀವ ತುಂಬಿದಂತಹ ವಚನಗಳು.
ಇಂತಹ ಸರ್ವಜ್ಞನ ವಚನಗಳನ್ನು ಅಕಾರಾದಿಯಗಿ ಜೋಡಿಸಿ ಮರುರೂಪಿಸಿರುವ ಅಪರೂಪದ ಸಂಪುಟವಾಗಿ ಈ ಕೃತಿ ಮೂಡಿದೆ. ಸರ್ವಜ್ಞನ ವಚನಗಳು ಆಹಾರ ಪದ್ದತಿಯ ಬಗೆಗೆ, ಜಾತಿ ಪದ್ದತಿಯ ಬಗೆಗೆ ಹಲವಾರು ತ್ರಿಪದಿ ರಚನೆಗಳನ್ನು ಕಾಣಬಹುದಾಗಿದೆ. ತನ್ನ ಕಾಲದ ಸೂಕ್ತಿಗಳನ್ನು, ಗಾದೆ ಮಾತುಗಳನ್ನು , ನುಡಿಗಟ್ಟುಗಳನ್ನು ಯಥೇಚ್ಛವಾಗಿ ಬಳಸಿರುವ ಸರ್ವಜ್ಞನ ವಚನಗಳು ಎಲ್ಲಾ ಕಾಲಕ್ಕೂ ಸಲ್ಲುವಂತದ್ದಾಗಿದೆ.
©2025 Book Brahma Private Limited.