ಉರಿವ ಕೆಂಡವ ಹೊತ್ತು

Author : ನಾಗೇಂದ್ರ ಮಸೂತಿ

Pages 60

₹ 30.00




Year of Publication: 2008
Published by: ಶ್ರೀ ರೇವಣಸಿದ್ದೇಶ್ಚರ ಪ್ರಕಾಶನ, ಬೀದರ್‌
Address: ಶ್ರೀ ಚಂದ್ರಪ್ಪ ನಿಂಗದಳ್ಳಿ, ಬಸವ ನಗರ ಕಾಲೋನಿ, ಬೀದರ
Phone: 08482-222031

Synopsys

ಡಾ.ನಾಗೇಂದ್ರ ಮಸೂತಿ ಅವರು  ಕೃತಿಯಲ್ಲಿ ತಮ್ಮ  ಜೀವನದಲ್ಲಿ ಅನುಭವಿಸುವಂತಹ ಏರಿಳಿತಗಳ, ಸಂಘರ್ಷಗಳ ಹಾಗೂ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಕಂಡಂತಹ ಘಟನೆಗಳ ವಿವರಗಳನ್ನು ಅಕ್ಷರದ ಮೂಲಕ ಪುಸ್ತಕದಲ್ಲಿ ವಿವರಿಸಿದ್ದಾರೆ. ಇದರಲ್ಲಿ 111 ವಚನಗಳಿವೆ. ಆಧುನಿಕ ಬದುಕಿನ ಸಂಕೀರ್ಣತೆ, ಮೌಢ್ಯಗಳು ವಚನಗಳ ವಸ್ತುವಾಗಿ ಇಲ್ಲಿ ಬಿಂಬಿತವಾಗಿವೆ.

 

About the Author

ನಾಗೇಂದ್ರ ಮಸೂತಿ
(20 June 1964)

ಕಲಬುರಗಿ ನಿವಾಸಿಯಾಗಿರುವ ಡಾ. ನಾಗೇಂದ್ರ ಎಸ್. ಮಸೂತಿ ಅವರು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲಬುರಗಿಯ ವಿ.ಜಿ. ಮಹಿಳಾ ಪದವಿ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ.  ಕಲಬುರ್ಗಿ ಕನ್ನಡ; ವರ್ಣನಾತ್ಮಕ ವ್ಯಾಕರಣ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿ.ವಿ. ಪಿಎಚ್.ಡಿ. ನೀಡಿದೆ. ’ಗುರುಸಿದ್ಧ’ ಅಂಕಿತದಲ್ಲಿ ಇವರು ವಚನಗಳನ್ನು ಬರೆಯುತ್ತಾರೆ. ಕಲ್ಯಾಣರಾವ ಪಾಟೀಲ್‌ ಮತ್ತು ಶಿವಶರಣಪ್ಪ ಮೋತಕಪಲ್ಲಿ ಅವರು ಮಸೂತಿ ಅವರ ಜೀವನ- ಸಾಹಿತ್ಯ ಕುರಿತ ’ನುಡಿತೋರಣ’ ಪುಸ್ತಕವನ್ನು ಸಂಪಾದಿಸಿದ್ದಾರೆ. ...

READ MORE

Related Books