ಲೋಕದ ಡೊಂಕನ್ನು ತಿದ್ದುವ ಸಾಮರ್ಥ್ಯ ವಚನ ಚಳವಳಿಗೆ ಇದೆ ಎಂಬುದಕ್ಕೆ 12ನೇ ಶತಮಾನದ ವಚನ ಸಾಹಿತ್ಯವೇ ಸಾಕ್ಷಿಯಾಗಿದೆ. ಇಂತಹ ವಚನ ಪರಂಪರೆಯನ್ನು ಆಧುನಿಕ ಕಾಲದಲ್ಲಿ ವಾಸ್ತವದ ವಿದ್ಯಮಾನಕ್ಕೆ ಮುಖಾಮುಖಿಯಾಗಿಸಿ ಉತ್ತರಿಸುವ ಅಗತ್ಯವಿದೆ. ಕರ್ನೂಲ್ ಜಿಲ್ಲೆಯ ವಲ್ಲೂರಿನವರಾದ ವಿ. ಹುಸೇನಿ ಶ್ರೀ ಕನಕರಾಯ ಎಂಬ ಅಂಕಿತನಾಮದ ಮೂಲಕ ವರ್ತಮಾನದ ತಲ್ಲಣಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.
ಮಾನವೀಯ ಪರಂಪರೆಯ ನಡುವೆ ವಚನ ಚಳವಳಿ ಹೆಜ್ಜೆ ಹೆಜ್ಜೆಗೆ ಮಾರ್ಮಿಕವಾಗಿ ನೆನಪಾಗುತ್ತದೆ. ವಚನ ಸಾಹಿತ್ಯ ಇಂದಿನ ವಾಸ್ತವ ಪರಿಸ್ಥಿತಿಯಲ್ಲಿ ಧರ್ಮ, ರಾಜಕಾರಣ ಮತ್ತು ಧರ್ಮ ಸಂಘರ್ಷಗಳಿಗೆ ವಚನ ಉತ್ತರ ಮತ್ತು ನೀತಿಸಾರ ಮಾರ್ಗದರ್ಶನವಾಗಿದೆ.
©2025 Book Brahma Private Limited.