'ವಚನಕ್ರಾಂತಿ' ಶಿವಮೂರ್ತಿ ಮುರುಘಾರಾಜೇಂದ್ರ ಶರಣರ ವಚನಗಳ ಸಂಕಲನ. ಶರಣರು ಸಮಾಜದಲ್ಲಿಯ ಅನ್ಯಾಯ-ಅಕ್ರಮಗಳು, ಅಸಹಾಯಕರ ಮೇಲಿನ ದೌರ್ಜನ್ಯಗಳು, ಜಾತೀಯತೆ, ಭ್ರಷ್ಟಾಚಾರ, ಡಂಭಾಚಾರ, ಸ್ತ್ರೀಶೋಷಣೆ, ಅನಕ್ಷರತೆಯ ಕಂಡು ಪರಿಹಾರಗಳನ್ನು ಚಿಂತಿಸಿದ ಫಲಶೃತಿಯ ಅಕ್ಷರರೂಪವೇ ವಚನಗಳು.
ಶರಣರು ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಗಳ ಭಾಗವಾಗಿಯೆ ಸಮಾಜ ಸುಧಾರಣ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಸುಧಾರಣೆಗೆ ಪ್ರವಚನ ಸಾಹಿತ್ಯಿಕ ಲೇಖನ ಚಿಂತನ ಬರಹಗಳ ಜೊತೆಗೆ ವಚನಗಳನ್ನುಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. "ಬಸವಪ್ರಿಯ ಮುರುಘರಾಜೇಂದ್ರಪ್ರಭು"ಎಂಬ ವಚನಾಂಕಿತದಲ್ಲಿ ಜಗದ್ಗುರು ಶಿವಮುರ್ತಿ ಮುರುಘರಾಜೇಂದ್ರರು ರಚಿಸಿದ 107 ವಚನಗಳು ಈ ಸಂಕಲನದಲ್ಲಿದೆ.
©2025 Book Brahma Private Limited.