ಸರ್ವಜ್ಞನ ಹೆಸರು ಕೆಳದವರು ಕನ್ನಡದಲ್ಲಿ ವಿರಳ,ಸರ್ವಜ್ಞ ಯಾರು ಎನ್ನುವ ಪ್ರಶ್ನೆಗೆ ಸಂಶೋಧಕರಲ್ಲೇ ಭಿನ್ನಾಭಿಪ್ರಾಯಗಳಿವೆ.ಸರ್ವಜ್ಞನ ಹೆಸರಲ್ಲಿ ಅನೇಕರು ಬರೆದು ಸೇರಿಸಿದ ವಚನಗಳು ಇವಾಗಿರಬಹುದಾ ಎನ್ನುವ ಚರ್ಚೆಗಳೂ ಇವೆ. 400 ವರ್ಷಗಳ ಹಿಂದೆ ಸರ್ವಜ್ಞನಿದ್ದ ಎನ್ನುವುದೂ ಒಂದು ಊಹೆಯೇ ಆಗಿದೆ. ಅವನ ವ್ಯಕ್ತಿಗತ ವಿವರಗಳಿಗಿಂತಲೂ ಸರ್ವಜ್ಞನ ವಚನಗಳು ಹೆಚ್ಚಿನ ಪ್ರಾಮುಖ್ಯ ಪಡೆದಿದೆ. ವಚನಗಳನ್ನು ಜನ ಸಾಮಾನ್ಯರು ಅರ್ಥ ಮಾಡಿಕೊಳ್ಳಲುಸಹಕಾರಿಯಾಗಿದೆ. ಈ ಪುಸ್ತಕವನ್ನು ಕನ್ನಡ ಉಪನ್ಯಾಸಕರಾದ ಸಿ.ಪಿ.ನಾಗರಾಜ ರಚಿಸಿದ್ದಾರೆ. ಸುಮಾರು 90 ವಚನಗಳ ತಿರುಳನ್ನು ಸರಳ ಕನ್ನಡದಲ್ಲಿ ವಿವರಿಸಿದ್ದಾರೆ. ವಚನದ ಪ್ರತಿ ಪದ ಮತ್ತು ಸಾಲನ್ನೂ ಅರ್ಥವತ್ತಾಗಿ ಸಮಾನ್ಯ ಜನರಿಗೆ ಆರ್ಥವಾಗುವ ರೀತಿಯಲ್ಲಿ ವಿವರಿಸಲಾಗಿದೆ.
©2024 Book Brahma Private Limited.