‘ಗಾದೆ ಹಳೆಯದಾದರೇನು ಅರ್ಥ ನವ ನವೀನ’ ಪುಸ್ತಕವು ಸಂಗಮೇಶ ಬಾದವಾಡಗಿ ಅವರ ಕೃತಿಯಾಗಿದೆ. "ವೇದ ಸುಳ್ಳಾದರು ಗಾದೆ ಸುಳ್ಳಾಗದು" ಎನ್ನುವ ಮಾತು ಜನಪದ ಸಂಸ್ಕೃತಿಯ ಪ್ರತಿನಿಧಿಯಾಗಿ ಹುಟ್ಟಿಬಂದಿದೆ. ಆಡು ಭಾಷೆಯ ಮೂಲಕ ಜನಪದರ ಬಾಯಲ್ಲಿ ಬಂದ ನುಡಿಗಟ್ಟುಗಳಲ್ಲಿ ನುಸುಳಿ ಬಂದಿರುವ ಹಸುಳೆಗಳಿಂದ ಬೆಳೆದು ಪ್ರಬುದ್ಧವಾಗಿ ನಿಂತಿದೆ. ಗಾದೆ ಎಂದರೆ ಮಾಗಿದ ಅನುಭವಗಳನ್ನು ಪ್ರಸಂಗಾವಧಾನಗಳಿಂದ ಉತ್ಪತ್ತಿಯಾದ ಉಪಮಿಸಬಾರದ ಉಪಮಾತೀತದ ಒಂದು ಒಳ್ಳೆಯ ನುಡಿ. ಗಾದೆ ಎಂದರೆ ಮನುಷ್ಯರನ್ನು ಸದ್ವರ್ತನೆಗೆ ಹಚ್ಚುವ ಮೋಡಿಯ ಒಂದು ಸಾಲು. ಇವುಗಳ ರಚನೆಯ ಹಿನ್ನೆಲೆಯನ್ನು ಅವಲೋಕಿಸಿದರೆ ಅದರಲ್ಲಿ ಅಪಾರ ಅನುಭವ, ಅರಿವು, ಚಿಕಿತ್ಸಕ ದೃಷ್ಟಿ, ಜೀವನದ ಸಿಹಿ ಕಹಿಗುಣಾವ ಗುಣಗಳು ಹಾಗೂ ಧೈಯ ಆದರ್ಶಗಳನ್ನು ಸಾರುವ ಸಂದೇಶ ವಾಹಕಗಳಾಗಿವೆ. ನೀತಿ, ಧರ್ಮ, ವಿವೇಕ, ಅಣಕ, ಶೃಂಗಾರ, ವೈರಾಗ್ಯ ಕೋಪ, ತಾಪ, ದುಃಖ, ವಿರಹ, ಪ್ರೀತಿ, ಮಾನ, ಸನ್ಮಾನ, ನಡಾವಳಿಕೆ, ನೈತಿಕತೆಗಳ ಅರ್ಥವಂತಿಕೆಯನ್ನು ಬಿಂಬಿಸುತ್ತ ಎಲ್ಲಾ ಕಾಲದ ಜನಾಂಗಕ್ಕೆ ಜನಪದರು ತೋರಿಸಿದ ದಾರಿದೀಪಗಳಾಗಿವೆ. ಇಂತಹ ಕೆಲವು ಗಾದೆಗಳು ಹಾಗೂ ಅದರ ಅರ್ಥ, ಬಳಸಬೇಕಾದ ಸಂದರ್ಭ ಮಾತುಗಾರಿಕೆಯ ಜಾಣ್ಮೆಯಿಂದ ಹುಟ್ಟಿದ ಗಾದೆಗಳು, ಪ್ರಸಂಗಕ್ಕೆ ತಕ್ಕ ಹಾಗೆ ಜೋಡಿಯಾಗಿ ಜೀಕುತ್ತವೆ ಎಂಬುದರ ಅರಿವು ಈ ಪುಸ್ತಕದಲ್ಲಿ ವಿವರಿಸಲಾಗಿದೆ.
©2025 Book Brahma Private Limited.