ಹಿರಿಯ ಕವಿ, ಲೇಖಕ, ಸಂಗಮೇಶ ಬಾದವಾಡಗಿಯವರು ಸಾಂಸ್ಕೃತಿಕ ಮೃದು ಧೋರಣೆಯುಳ್ಳವರು. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಚಿರಪರಿಚಿತರಾಗಿದ್ದಾರೆ. ಸಂಪಾದನೆ, ಕಥೆ, ಕವನ, ಪ್ರಬಂಧ ಸೇರಿದಂತೆ ಈವರೆಗೂ ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ.
ಪ್ರವಾಸದ ಅದ್ಭುತ ಅನುಭವಗಳೊಂದಿಗೆ ಸಾಂದರ್ಭಿಕ ಸನ್ನಿವೇಶಗಳನ್ನು ಕೌಶಲ್ಯತೆಯಿಂದ ಹೆಣೆಯುತ್ತ, ಚಾರಿತ್ರಿಕ ಅಂಶಗಳನ್ನು ಬಣ್ಣಿಸುತ್ತಾ ಸರಾಗವಾಗಿ ಪ್ರವಾಸ ಕಥನವನ್ನು ಬರೆದಿದ್ದಾರೆ. ಭಾಷಾ ಲಾಲಿತ್ಯವನ್ನು ಪ್ರಾದೇಶಿಕ ಭಾಷೆಗೆ ತಳಕು ಹಾಕುತ್ತಾ, ಭಾವ ನಿರ್ಬರತೆ, ಜೀವನಾನುಭವಗಳಿಂದ ಕಡಿಮೆ ಶಬ್ದಗಳ ಬಳಕೆಯಿಂದ ಗಜಲ್, ಶಾಯರಿ ಕೃತಿಗಳನ್ನು ರಚಿಸಿದ್ದಾರೆ.
ಕೃತಿಗಳು: ಗಾದೆ ಹಳೆಯದಾದರೇನು ಅರ್ಥ ನವ ನವೀನ(ಗಾದೆಗಳ ಪ್ರಬಂಧ)