ಗಾದೆಗಳ ಅಂತರಂಗ

Author : ಶರಣಬಸಪ್ಪ ವಡ್ಡನಕೇರಿ

Pages 40

₹ 10.00




Year of Publication: 2009
Published by: ಲಕ್ಷ್ಮಿ ಪ್ರಕಾಶನ
Address: ಡೊಂಗರಗಾಂವ,ಮ ತಾಲೂಕು ಹಾಗೂ ಜಿಲ್ಲೆ ಕಲಬುರಗಿ ಕಲಬುರಗಿ

Synopsys

ಲೇಖಕ ಶರಣಬಸಪ್ಪ ವಡ್ಡನಕೇರಿ ಅವರ ಕೃತಿ ಗಾದೆಗಳ ಅಂತರಂಗ. ಗಾದೆಗಳು ಕರ್ನಾಟಕದ ಜನತೆಯ ಜೀವನದಲ್ಲಿ ಹಾಸುಹೊಕ್ಕಾಗಿವೆ. ಜನತೆ ತಮ್ಮ ಮಾತಿನ ನಡುವೆ ಗಾದೆಗಳನ್ನು ಬಳಸಿ ಮಾತಿಗೆ ಮೋನಚನ್ನು ಮಹತ್ವವನ್ನು ಉದ್ದೇಶವನ್ನು ಸಾಧಿಸುತ್ತಾರೆ. ಗಾದೆಗಳನ್ನು ಸಾಂದರ್ಭಿಕವಾಗಿ ಅರ್ಥವತ್ತಾಗಿ ಬಳಸಿ 'ಮಾತಿನ ಮಲ್ಲ' ಎಂಬ ಬಿರುದು ಪಡೆಯುತ್ತಾರೆ. ಮಾತುಗಾರಿಕೆಯಿಂದ ಗಾದೆಯನ್ನು ಸೊಗಸಾಗಿ ಬಳಸುವುದರಿಂದ ಒಬ್ಬರ ಆತ್ಮೀಯತೆಗೆ ಒಬ್ಬರು ಒಳಗಾಗಿ ಅಂತರಂಗವನ್ನು ಗೆಲ್ಲಬಹುದು. ಬದುಕು ಮೃದು ಮಧುರವಾಗಬಹುದು ಊಟದ ನಡುವೆ ಉಪ್ಪಿನಕಾಯಿಯಂತೆ ಮಾತನಾಡಬೇಕಾದ ಮಾತಿನ ಮಾಧುರ್ಯವನ್ನು ಹೆಚ್ಚಿಸುತ್ತವೆ. ಹತ್ತು ಮಾತನಾಡುವ ಕಡೆಗೊಂದು ಗಾದೆ ಸಮರ್ಪಕವಾಗಿ,ಸಮರ್ಥವಾಗಿ ಬಳಕೆಯಾದರೆ ಉದ್ದೇಶ ಸಾರ್ಥಕವಾಗುತ್ತದೆ. ಗಾದೆಗಳಿಂದ ಬದುಕಿನ ವ್ಯವಹಾರ ಕುದುರುತ್ತದೆ.ಬಾಳು ಅಪ್ಯಾಯಮಾನ ಆನಂದದಾಯಕವಾಗಿರುತ್ತದೆ. ಆದ್ದರಿಂದಲೇ ಜನಪದರು ನಗರ ಜನಪದ ಗಾದೆಗಳನ್ನು ಬಳಸುತ್ತಾರೆ. ಈ ಕೃತಿಯಲ್ಲಿ 26 ಗಾದೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದು,ವಿದ್ಯಾರ್ಥಿಗಳ ಪರೀಕ್ಷಾ ಅನುಕೂಲಕ್ಕಾಗಿ ರಚಿಸಲಾಗಿದೆ.

About the Author

ಶರಣಬಸಪ್ಪ ವಡ್ಡನಕೇರಿ
(22 May 1980)

ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಪಡೆದು, ನಂತರ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ನಲ್ಲಿ ಎಂ. ಎ (ಶಿಕ್ಷಣ) ಪದವೀಧರರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ (ಪತ್ರಿಕೋದ್ಯಮ ) ಪದವೀಧರರು. ಅಲ್ಲದೇ, ಎಂ. ಫಿಲ್ ಮತ್ತು ಪಿ.ಎಚ್ ಡಿ ಹಾಗೂ ಡಿ. ಲಿಟ್ ಪದವೀಧರರು. ತಾಯಿಯವರ ಹೆಸರಿನಲ್ಲಿ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ 60 ಕ್ಕಿಂತ ಹೆಚ್ಚು ...

READ MORE

Related Books