ಲೇಖಕಿ ಪ್ರೊ. ವಿಶಾಲಾಕ್ಷಿ ದೇಶಪಾಂಡೆ ಅವರ ಕೃತಿ-ಕನ್ನಡ ಗಾದೆ ಮಾತುಗಳು. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬುದು ಗಾದೆಗಳ ಮಹತ್ವ ತಿಳಿಸುತ್ತದೆ. ಸ್ವಲ್ಪೇ ಶಬ್ದಗಳಲ್ಲಿ ಹಿರಿದಾದ ಅರ್ಥವನ್ನು ತುಂಬಿ, ಬದುಕಿ ಸಾರವನ್ನು, ಎದುರಿಸುವ ಬಗೆಯನ್ನು, ಮನುಷ್ಯ ಸ್ವಭಾವಗಳನ್ನು ಹೀಗೆ ಎಲ್ಲವನ್ನೂ ತಿಳೀಸುವ ಗಾದೆಗಳು ಅನುಭವದ ಪಾಕಗಳು. ಅವೆಂದೂ ಸುಳ್ಳಾಗಲಾರವು. ಅದಕ್ಕೆಂದೇ, ಗಾದೆಯ ಮಹತ್ವ ವೇದಗಳಿಗಿಂತ ಹೆಚ್ಚು. ಕನ್ನಡಿಯಂತೆ ಏನು ಇದೆಯೋ ಅದನ್ನು ಮಾತ್ರ ತೋರುವಂತೆ ಈ ಗಾದೆಗಳು. ಲೇಕಕಿಯು ಇಂತಹ ಕನ್ನಡದ ಗಾದೆಗಳನ್ನು ಸಂಗ್ರಹಿಸಿ ನೀಡಿದ್ದು, ಈ ಕೃತಿಯ ವೈಶಿಷ್ಟ್ಯ.
©2025 Book Brahma Private Limited.