ಗಾದೆ ಹಳೆಯದಾದರೇನು ಅರ್ಥ ನವ ನವೀನ

Author : ಸಂಗಮೇಶ ಬಾದವಾಡಗಿ

Pages 144

₹ 125.00




Year of Publication: 2024
Published by: ಡಾ. ಸಿದ್ದಯ್ಯ ಪುರಾಣಿಕ ಸ್ಮಾರಕ ರಾಷ್ಟ್ರೀಯ ಟ್ರಸ್ಟ್
Address: ನಂ. 43, ಬಸವನಗರ, ವಾರ್ಡ್ ನಂ. 22 ಇಂದ್ರಕೀಲನಗರ, ಗದಗ ರಸ್ತೆ, ಕೊಪ್ಪಳ
Phone: 9731163531

Synopsys

‘ಗಾದೆ ಹಳೆಯದಾದರೇನು ಅರ್ಥ ನವ ನವೀನ’ ಸಂಗಮೇಶ ಬಾದವಾಡಗಿ ಅವರ ಕೃತಿಯಾಗಿದೆ. "ವೇದ ಸುಳ್ಳಾದರು ಗಾದೆ ಸುಳ್ಳಾಗದು" ಎನ್ನುವ ಮಾತು ಜನಪದ ಸಂಸ್ಕೃತಿಯ ಪ್ರತಿನಿಧಿಯಾಗಿ ಹುಟ್ಟಿಬಂದಿದೆ. ಆಡು ಭಾಷೆಯ ಮೂಲಕ ಜನಪದರ ಬಾಯಲ್ಲಿ ಬಂದ ನುಡಿಗಟ್ಟುಗಳಲ್ಲಿ ನುಸುಳಿ ಬಂದಿರುವ ಹಸುಳೆಗಳಿಂದ ಬೆಳೆದು ಪ್ರಬುದ್ಧವಾಗಿ ನಿಂತಿದೆ. ಗಾದೆ ಎಂದರೆ ಮಾಗಿದ ಅನುಭವಗಳನ್ನು ಪ್ರಸಂಗಾವಧಾನಗಳಿಂದ ಉತ್ಪತ್ತಿಯಾದ ಉಪಮಿಸಬಾರದ ಉಪಮಾತೀತದ ಒಂದು ಒಳ್ಳೆಯ ನುಡಿ. ಗಾದೆ ಎಂದರೆ ಮನುಷ್ಯರನ್ನು ಸದ್ವರ್ತನೆಗೆ ಹಚ್ಚುವ ಮೋಡಿಯ ಒಂದು ಸಾಲು. ಇವುಗಳ ರಚನೆಯ ಹಿನ್ನೆಲೆಯನ್ನು ಅವಲೋಕಿಸಿದರೆ ಅದರಲ್ಲಿ ಅಪಾರ ಅನುಭವ, ಅರಿವು, ಚಿಕಿತ್ಸಕ ದೃಷ್ಟಿ, ಜೀವನದ ಸಿಹಿ ಕಹಿಗುಣಾವ ಗುಣಗಳು ಹಾಗೂ ಧೈಯ ಆದರ್ಶಗಳನ್ನು ಸಾರುವ ಸಂದೇಶ ವಾಹಕಗಳಾಗಿವೆ. ನೀತಿ, ಧರ್ಮ, ವಿವೇಕ, ಅಣಕ, ಶೃಂಗಾರ, ವೈರಾಗ್ಯ ಕೋಪ, ತಾಪ, ದುಃಖ, ವಿರಹ, ಪ್ರೀತಿ, ಮಾನ, ಸನ್ಮಾನ, ನಡಾವಳಿಕೆ, ನೈತಿಕತೆಗಳ ಅರ್ಥವಂತಿಕೆಯನ್ನು ಬಿಂಬಿಸುತ್ತ ಎಲ್ಲಾ ಕಾಲದ ಜನಾಂಗಕ್ಕೆ ಜನಪದರು ತೋರಿಸಿದ ದಾರಿದೀಪಗಳಾಗಿವೆ. ಇಂತಹ ಕೆಲವು ಗಾದೆಗಳು ಹಾಗೂ ಅದರ ಅರ್ಥ, ಬಳಸಬೇಕಾದ ಸಂದರ್ಭ ಮಾತುಗಾರಿಕೆಯ ಜಾಣ್ಮೆಯಿಂದ ಹುಟ್ಟಿದ ಗಾದೆಗಳು, ಪ್ರಸಂಗಕ್ಕೆ ತಕ್ಕ ಹಾಗೆ ಜೋಡಿಯಾಗಿ ಜೀಕುತ್ತವೆ ಎಂಬುದರ ಅರಿವು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

About the Author

ಸಂಗಮೇಶ ಬಾದವಾಡಗಿ
(14 November 1972)

ಹಿರಿಯ ಕವಿ, ಲೇಖಕ, ಸಂಗಮೇಶ ಬಾದವಾಡಗಿಯವರು ಸಾಂಸ್ಕೃತಿಕ ಮೃದು ಧೋರಣೆಯುಳ್ಳವರು. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಚಿರಪರಿಚಿತರಾಗಿದ್ದಾರೆ. ಸಂಪಾದನೆ, ಕಥೆ, ಕವನ, ಪ್ರಬಂಧ ಸೇರಿದಂತೆ ಈವರೆಗೂ ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ.  ಪ್ರವಾಸದ ಅದ್ಭುತ ಅನುಭವಗಳೊಂದಿಗೆ ಸಾಂದರ್ಭಿಕ ಸನ್ನಿವೇಶಗಳನ್ನು ಕೌಶಲ್ಯತೆಯಿಂದ ಹೆಣೆಯುತ್ತ, ಚಾರಿತ್ರಿಕ ಅಂಶಗಳನ್ನು ಬಣ್ಣಿಸುತ್ತಾ ಸರಾಗವಾಗಿ ಪ್ರವಾಸ ಕಥನವನ್ನು ಬರೆದಿದ್ದಾರೆ. ಭಾಷಾ ಲಾಲಿತ್ಯವನ್ನು ಪ್ರಾದೇಶಿಕ ಭಾಷೆಗೆ ತಳಕು ಹಾಕುತ್ತಾ, ಭಾವ ನಿರ್ಬರತೆ, ಜೀವನಾನುಭವಗಳಿಂದ ಕಡಿಮೆ ಶಬ್ದಗಳ ಬಳಕೆಯಿಂದ ಗಜಲ್, ಶಾಯರಿ ಕೃತಿಗಳನ್ನು ರಚಿಸಿದ್ದಾರೆ. ಕೃತಿಗಳು: ಗಾದೆ ಹಳೆಯದಾದರೇನು ...

READ MORE

Related Books