ಲೇಖಕ ಸಂಪಟೂರು ವಿಶ್ವನಾಥ ಅವರು ಬರೆದ ಕೃತಿ-ಜನಪ್ರಿಯ ನೂರಾರು ಅರ್ಥಸಹಿತ ಗಾದೆಗಳು. ಒಡವು, ಸೂಕ್ತಿ, ಸೂಳ್ನುಡಿ, ಗಾದೆಗಳು ಇವು ನಮ್ಮ ಜನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅಂಶಗಳು. ಚುಟುಕಾದರೂ ಹಿರಿದರ್ಥವನ್ನು ತುಂಬಿಕೊಂಡು, ಓದುಗರ ಮನ ಸೆಳೆಯುತ್ತವೆ. ಗಾದೆಗಳು ಗಾತ್ರದಲ್ಲಿ ಕಿರಿದು. ಆದರೆ, ಅನುಭವದ ಹಿನ್ನೆಲೆಯಲ್ಲಿ ಈ ಗಾದೆಗಳು ರೂಪುಗೊಂಡಿರುವುದರಿಂದ ಅವುಗಳಿಗೆ ಅರ್ಥ ಹೆಚ್ಚು. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತೇ ಇವುಗಳ ಹಿರಿಮೆಗೆ ಸಾಕ್ಷಿ. ಇಂತಹ ನೂರಾರು ಗಾದೆಗಳನ್ನು ಸಂಗ್ರಹಿಸಿರುವ ಲೇಖಕರು, ಅವುಗಳ ಅರ್ಥಸಹಿತ ವಿವರಣೆಯನಗ್ನು ನೀಡುವ ಮೂಲಕ ಕೃತಿಯ ಮೌಲ್ಯ ಹೆಚ್ಚಿಸಿದ್ದಾರೆ. ಅಗತ್ತಕ್ಕೆ ತಕ್ಕಂತೆ ಚಿತ್ರಗಳನ್ನು ಸಹ ನೀಡಿದ್ದು, ಪರಿಣಾಮಕತೆಯನ್ನು ಹೆಚ್ಚಿಸಿದೆ.
©2024 Book Brahma Private Limited.