ಸೂಕ್ತಿ -ವ್ಯಾಪ್ತಿ (ಭಾಗ- 2)

Author : ಎನ್. ರಂಗನಾಥಶರ್ಮಾ

Pages 90

₹ 55.00




Year of Publication: 1996
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ಸೂಕ್ತಿ -ವ್ಯಾಪ್ತಿ (ಭಾಗ- 2) ಲೇಖಕ ಎನ್.‌ ರಂಗನಾಥಶರ್ಮಾ ಅವರು ಸುಭಾಷಿತಗಳನ್ನು ಸಂಗ್ರಹಿಸಿದ ಕೃತಿ. ಸೂಕ್ತಿ-ವ್ಯಾಪ್ತಿಯ ಎರಡನೇ ಅಧ್ಯಾಯವಾಗಿದ್ದು, ಯಾವುದೋ ಜೀವನಾನುಭವವನ್ನೋ ಪಥದರ್ಶಕ ಸೂತ್ರವನ್ನೋ ಸ್ಮರಣೀಯ ರೀತಿಯಲ್ಲಿ ಸುಭಾಷಿತಗಳು ಅಳವಡಿಸಿರುತ್ತವೆ. ಇದರಿಂದಾಗಿ ಸುಭಾಷಿತಗಳು ಜನರ ನಿತ್ಯದ ಬದುಕಿಗೆ ನೇರವಾಗಿ ಸಂಬಂಧಪಟ್ಟಿವೆ. ಬೇರೆ ಬೇರೆ ಮೂಲಗಳಿಂದ ಆಯ್ದ ಕೆಲ ಸುಭಾಷಿತ ಶ್ಲೋಕಗಳನ್ನು ಇಲ್ಲಿ ಸಂಕಲಿಸಲಾಗಿದೆ. ಪ್ರತಿಯೊಂದು ಶ್ಲೋಕದ ಅರ್ಥವನ್ನು ಇಂದಿನ ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ವಿವೇಚಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ. 

About the Author

ಎನ್. ರಂಗನಾಥಶರ್ಮಾ
(07 January 1916 - 25 January 2014)

ವಿದ್ವಾನ್ ಎನ್. ರಂಗನಾಥಶರ್ಮಾ ಅವರು 1916 ಜನವರಿ 07ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಿಮ್ಮಪ್ಪ, ತಾಯಿ-ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿ ಮುಗಿಯಿತು. ಅಗಡಿಯ ಆನಂದವನ ಆಶ್ರಮದಲ್ಲಿ ಸಂಸ್ಕೃತ ಕಲಿತ ಅವರು ನಂತರ ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಇದರೊಂದಿಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆಗಳನ್ನೂ ಪಾಸ್ ಮಾಡಿದರು. ಡಿವಿಜಿ ಅವರ ಒಡನಾಡಿ ಆಗಿದ್ದ ಅವರು ಡಿವಿಜಿ ಮರಣಾ ನಂತರ ‘ಮರಳು ಮುನಿಯನ ಕಗ್ಗ’ದ ಕರಡು ತಿದ್ದಿದವರೇ ರಂಗನಾಥ ಶರ್ಮಾ.  ಸಂಸ್ಕೃತ ಕೃತಿಗಳು: ಬಾಹುಬಲಿ ವಿಜಯಂ (ಐತಿಹಾಸಿಕ ನಾಟಕ), ಏಕಚಕ್ರಂ (ಪೌರಾಣಿಕ ನಾಟಕ, ಗುರುಪಾರಮಿತ್ರ ಚರಿತಂ, ಗೊಮ್ಮಟೇಶ್ವರ ಸುಪ್ರಭಾತಂ, ಗೊಮ್ಮಟೇಶ ...

READ MORE

Related Books