'ಸಾಹಿತಿಗಳ ಭಾವಚಿತ್ರಕಾರ' ಎಂದೇ ಖ್ಯಾತರಾಗಿರುವ ಛಾಯಾಗ್ರಾಹಕ ಎ ಎನ್ ಮುಕುಂದರು ಕಳೆದ ನಾಲ್ಕು ದಶಕಗಳಲ್ಲಿ ತೆಗೆದ ಐವತ್ತು ಪ್ರಸಿದ್ದ ಕನ್ನಡ ಸಾಹಿತಿಗಳ ಭಾವಚಿತ್ರಗಳು ’ಮುಖಮುದ್ರೆ’ ಸಂಪುಟದಲ್ಲಿ ಸೇರಿವೆ.
ಈ ಎಲ್ಲ ಸಾಹಿತಿಗಳ ಕಿರು ಪರಿಚಯಗಳೊಂದಿಗೆ ಫೋಟೋ ತೆಗೆಯುವ ಸಂದರ್ಭದ ತಮ್ಮ ಅನುಭವಗಳನ್ನು ಮುಕುಂದರು ಇಲ್ಲಿ ದಾಖಲಿಸಿರುವುದು ಈ ಪುಸ್ತಕದ ವೈಶಿಷ್ಟವಾಗಿದೆ. ಭಾವಚಿತ್ರಣದಲ್ಲಿ ತಮ್ಮದೇ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡಿರುವ ಮುಕುಂದರು, ಈ ಎಲ್ಲ ಚಿತ್ರಗಳನ್ನು ಸಾಹಿತಿಗಳು ವಾಸಿಸುವ ಸ್ಥಳಗಳಿಗೆ ತೆರಳಿ, ಅವರೊಂದಿಗೆ ಕೆಲವು ಗಂಟೆಗಳ ಕಾಲ ಒಡನಾಡಿ ಅವರ ಸಹಜ ವಾತಾವರಣದಲ್ಲಿಯೇ ತೆಗೆದಿದ್ದಾರೆ.
ಪೋರ್ಟ್ರೇಟ್ ಅಂದರೆ ಕೇವಲ ಭಾವಚಿತ್ರವಲ್ಲ, ಅದೊಂದು ವಿಶಿಷ್ಟ ಭಾವಚಿತ್ರ' ಅಥವಾ ವ್ಯಕ್ತಿತ್ವ ಚಿತ್ರ' ಎನ್ನುವ ಮುಕುಂದರ ನಿಲುವು ಈ ಛಾಯಾಚಿತ್ರಗಳಲ್ಲಿ ಮೂರ್ತವಾಗಿ ವ್ಯಕ್ತವಾಗಿದೆ. ವ್ಯಕ್ತಿಯ ಮುಖವೇ ಅವನ ವ್ಯಕ್ತಿತ್ವದ ಸಮರ್ಪಕ ಅಭಿವ್ಯಕ್ತಿ ಎಂಬ ಪ್ರಬಲವಾದ ನಂಬಿಕೆ ಹಾಗೂ ವಿಶ್ವಾಸಗಳನ್ನು ಇಟ್ಟುಕೊಂಡಿರುವ ಮುಕುಂದರು ಅತ್ಯಂತ ಸಂಯಮದಿಂದ ಏಕಾಗ್ರತೆಯಿಂದ ಕಾದು ಸೆರೆಹಿಡಿದ 'ಮಾಂತ್ರಿಕ ಕ್ಷಣಗಳಿಂದಾಗಿ ಈ ಎಲ್ಲ ಭಾವಚಿತ್ರಗಳಿಗೆ ಏಕಕಾಲಕ್ಕೆ ಅಧಿಕೃತತೆ ಮತ್ತು ಆಪ್ತತೆ ಲಭ್ಯವಾಗಿವೆ.
©2024 Book Brahma Private Limited.