ಅನುರಕ್ತಿ (ಕವಿತೆ-ಚಿತ್ರ)

Author : ಕೆ.ಸಿ. ಶಿವಾರೆಡ್ಡಿ

Pages 344

₹ 2750.00




Year of Publication: 2014
Published by: ಮೆ. ಎಂ. ಮುನಿಸ್ವಾಮಿ ಅಂಡ್‌ ಸನ್ಸ್‌,
Address: ಸರ್ವೋದಯ, ನಂ. 72, ಪ್ರೊ. ಎ.ಆರ್‌.ಕೃಷ್ಣಶಾಸ್ತ್ರೀ ರಸ್ತೆ (ಸರ್ವೇಯರ್‌ ರಸ್ತೆ), ಬಸವನ ಗುಡಿ, ಬೆಂಗಳೂರು-560004

Synopsys

ರಸಋಷಿ ಕುವೆಂಪು ಅವರ ಕವಿತೆಗಳನ್ನು ಅವು ಕಟ್ಟಿಕೊಡುವ ದೃಶ್ಯರೂಪಕಗಳೊಂದಿಗೆ ನೀಡುವ ಮಹತ್ವದ ಮತ್ತು ಅಪರೂಪದ ಪುಸ್ತಕ. ಅತ್ಯುತ್ತಮ ಗುಣಮಟ್ಟದ ಮುದ್ರಣ ಹಾಗೂ ಅಷ್ಟೇ ಸೊಗಸಾದ ಕಣ್ಮನ ತಣಿಸುವ ಚಿತ್ರಗಳು ಈ ಪುಸ್ತಕದ ಹಿರಿಮೆಯನ್ನು ಹೆಚ್ಚಿಸಿವೆ. ಸಂಪಾದಕ ಕೆ.ಸಿ. ಶಿವಾರೆಡ್ಡಿ ಅವರ ಪರಿಶ್ರಮ ಎದ್ದು ಕಾಣುತ್ತದೆ. ಕವಿತೆಯನ್ನು ಓದುವುದರ ಜೊತೆಗೆ ಅದನ್ನು ಮತ್ತೊಂದು ನೋಟದಲ್ಲಿ  ಪರಿಭಾವಿಸುವ ರೀತಿ ದಾಖಲಿಸಿರುವುದು ವಿಶೇಷ.

About the Author

ಕೆ.ಸಿ. ಶಿವಾರೆಡ್ಡಿ
(01 June 1961)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.  ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ...

READ MORE

Related Books