About the Author

ಕರ್ನಾಟಕದ ಉತ್ತಮ ಛಾಯಾಗ್ರಹಣಕಾರರಲ್ಲಿ ಎ.ಎನ್.ಮುಕುಂದ ಒಬ್ಬರು. ಛಾಯಾಗ್ರಾಹಕರಾಗಿ ಸಾಹಿತ್ಯಕ್ಕೆ ಪೂರಕವಾದ ಸಾಹಿತಿಗಳ ಭಾವಚಿತ್ರ, ವಿಶೇಷ ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ.  ಇವರು ದಾವಣಗೆರೆಯ ಹರಿಹರದಲ್ಲಿ 1955ರಲ್ಲಿ ಜನಿಸಿದರು. ವಿದ್ಯಾಭ್ಯಾಸದ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ 30 ವರ್ಷದ ಸೇವೆಯಲ್ಲಿದ್ದು 2008ರಲ್ಲಿ ಸ್ವಯಂ ನಿವೃತ್ತಿ ಪಡೆದು ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಕಳೆದ ಸುಮಾರು ಎರಡೂವರೆ ದಶಕಗಳಲ್ಲಿ ಅವರು ತೆಗೆದ ಸಾಹಿತಿಗಳ, ಸಂಗೀತಗಾರರ, ರಾಜಕಾರಣಿಗಳ, ಮಕ್ಕಳ ಭಾವಚಿತ್ರಗಳು ರಾಜ್ಯದ ಪ್ರತಿಷ್ಠಿತ ಆಂಗ್ಲ ಹಾಗೂ ಕನ್ನಡ ನಿಯತಕಾಲಿಕೆಗಳಲ್ಲಿ, ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗಿವೆ.

ಜಿ.ಬಿ. ಜೋಶಿ, ಪು.ತಿ.ನ., ರಾಮಚಂದ್ರ ಶರ್ಮ, ಕೆ.ವಿ.ಸುಬ್ಬಣ್ಣ, ಡಿ.ಆರ್.ನಾಗರಾಜ್ ಮೊದಲಾದವರ ಫೋಟೋಗಳು.... ಅವರ ಕ್ಯಾಮೆರಾಕ್ಕೆ ಸಿಕ್ಕಿರುವ ಲೇಖಕರೆಲ್ಲರೂ ಒಂದಾನೊಂದು ಕಾಲದ ಒಂದು ಕ್ಷಣದಲ್ಲಿ ಒಬ್ಬರಿಗಿಂತ ಒಬ್ಬರು ವೈಯಕ್ತಿಕ ಹಂತದಲ್ಲಿ ಹೇಗೆ ಅಪೂರ್ವವಾಗಿದ್ದರೆಂದು ದಾಖಲಿಸುತ್ತಿದೆ" ಎಂದು ಮುಕುಂದರವರ ಚಾಕಚಕ್ಯತೆಯನ್ನು ದಾಖಲಿಸುತ್ತಾರೆ ಕನ್ನಡದ ಖ್ಯಾತ ಲೇಖಕ ಎಸ್. ದಿವಾಕರ್ ಅವರು.

 

 

ಎ.ಎನ್. ಮುಕುಂದ