ಕ್ಯಾಮರಾ ಕಣ್ಣಲ್ಲಿ ರಾಜ್

Author : ಶಶಿಧರ ಚಿತ್ರದುರ್ಗ

Pages 150

₹ 150.00




Year of Publication: 2013
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

ಭವಾನಿ ಲಕ್ಷ್ಮೀನಾರಾಯಣ ಅವರು 60, 70ರ ದಶಕಗಳಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ. ಮದರಾಸಿನ ಸ್ಟುಡಿಯೋಗಳಲ್ಲಿನ ಕನ್ನಡ ಸಿನಿಮಾಗಳ ಚಿತ್ರೀಕರಣದ ಕ್ಷಣಗಳನ್ನು ಅವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ಕನ್ನಡ ಪತ್ರಿಕೆಗಳಿಗೆ ಕಳುಹಿಸುತ್ತಿದ್ದರು. ವರನಟ ಡಾ.ರಾಜಕುಮಾರ್ ಅವರ ಆಪ್ತರಲ್ಲೊಬ್ಬರು. ಭವಾನಿಯವರ ಕ್ಯಾಮರಾ ಕಣ್ಣಲ್ಲಿ ಕಂಡ ರಾಜ್‌ರ ಅಪರೂಪದ ಫೋಟೋಗಳು ಹಾಗೂ ವರನಟನ ವ್ಯಕ್ತಿತ್ವವನ್ನು ಹೇಳುವ ವಿಶಿಷ್ಟ ಪ್ರಯತ್ನ.

About the Author

ಶಶಿಧರ ಚಿತ್ರದುರ್ಗ
(11 August 1979)

ಊರು ಕೋಟೆ ನಾಡು ಚಿತ್ರದುರ್ಗ. ಶಾಲೆ- ಕಾಲೇಜು ಓದಿದ್ದು ಚಿತ್ರದುರ್ಗದಲ್ಲಿ. ದುರ್ಗದ 'ಸುದ್ದಿಗಿಡುಗ' ಜಿಲ್ಲಾ ಪತ್ರಿಕೆಯಲ್ಲಿ ಪತ್ರಿಕೋದ್ಯಮ ಶುರುವಾಯ್ತು. ಮುಂದೆ 'ಕನ್ನಡ ಪ್ರಭ' ಪತ್ರಿಕೆ ಸೇರಿದಾಗ ಸಿನಿಮಾ ಪತ್ರಿಕೋದ್ಯಮದ ನಂಟು ಸಿಕ್ಕಿತು. ನಂತರ 'ಟೈಮ್ಸ್ ಆಫ್ ಇಂಡಿಯಾ' ಬಳಗದ 'ವಿಜಯ ನೆಕ್ಸ್ಟ್', 'ವಿಜಯ ಕರ್ನಾಟಕ'ದಲ್ಲಿ ಕಾರ್ಯನಿರ್ವಹಣೆ. 'ದಿ ಸ್ಟೇಟ್' ನೊಂದಿಗೆ ಡಿಜಿಟಲ್ ಪತ್ರಿಕೋದ್ಯಮ ಪರಿಚಯ. ಪ್ರಸ್ತುತ ಫ್ರೀಲಾನ್ಸರ್. ಇಲ್ಲಿಯವರೆಗೆ ಎಂಟು ಪುಸ್ತಕಗಳು ಪ್ರಕಟವಾಗಿವೆ. ಇವುಗಳ ಪೈಕಿ ಏಳು ಸಿನೆಮಾಗೆ ಸಂಬಂಧಿಸಿದ ಕೃತಿಗಳು. ವೃತ್ತಿಯಲ್ಲಿ ಸಿನಿಮಾ ಪತ್ರಕರ್ತ. ವಿವಿಧ ಪತ್ರಿಕೆ, ಪೋರ್ಟಲ್‌ಗಳಲ್ಲಿ ಹದಿನೈದು ವರ್ಷಗಳ ಅನುಭವ. ಸಿನಿಮಾ ವೀಕ್ಷಣೆ, ಫೋಟೋಗ್ರಫಿ ...

READ MORE

Related Books