ಕಲಾವಿದ ಹಾಗೂ ಲೇಖಕ ಪುಂಡಲೀಕ ಕಲ್ಲಿಗನೂರು ಅವರ ಕೃತಿ,ʻಬೇಲೂರು ಹಳೇಬೀಡು ಶಿಲ್ಪಕಲಾ ಸಾಮ್ರಾಜ್ಯʼ. ಹಾಸನ ಜಿಲ್ಲೆಯ ಹೊಯ್ಸಳ ದೇವಾಲಯಗಳಾದ ಬೇಲೂರು–ಹಳೇಬೀಡಿನ ಶಿಲ್ಪಕಲೆಯನ್ನು ಕಲಾತ್ಮಕವಾಗಿ ಸೆರೆ ಹಿಡಿದು ಈ ಪುಸ್ತಕದಲ್ಲಿ ಕೊಟ್ಟಿದ್ದಾರೆ. ಛಾಯಾಗ್ರಾಹಕ ಪುಂಡಲೀಕ ಕಲ್ಲಿಗನೂರು, ತಮ್ಮ ಚಿತ್ರಗಳೂ ಸೇರಿದಂತೆ ಸಹ ಛಾಯಾಗ್ರಾಹಕರಾದ ದೀಪು ಬೇಲೂರು, ಮಹಾಲಿಂಗು, ಎಂ. ವಿಶ್ವನಾಥ್, ವಿಪಿನ್ ಬಾಳಿಗಾ ಅವರ ಚಿತ್ರಗಳನ್ನು ಇಟ್ಟುಕೊಂಡು ಈ ಸಂಪುಟವನ್ನು ಸಂಪಾದಿಸಿದ್ದಾರೆ. ಇವರೆಲ್ಲರ ಅಪಾರ ಶ್ರಮ ಇಲ್ಲಿ ಪ್ರತಿ ಪುಟಗಳಲ್ಲಿ ಕಾಣುತ್ತದೆ. ಜೊತೆಗೆ, ಆ ಶಿಲ್ಪಗಳ ಕುರಿತ ವಿವರಣೆಯೂ ಸಂಪುಟದಲ್ಲಿದೆ. ಬೇಲೂರಿನ ಚೆನ್ನಕೇಶವ, ನಾಟ್ಯರಾಣಿ ಶಾಂತಲೆ, ರತಿ–ಮನ್ಮಥರು, ವಿಷ್ಣು ಶಿಲ್ಪಗಳು, ಶಿಲಾಬಾಲಿಕೆಯರ ಶಿಲ್ಪಗಳ ಹಾಗೂ ಹಳೇಬೀಡಿನ ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ಜೋಡಿ ದೇವಾಲಯಗಳು, ಅಲ್ಲಿನ ದೇವತೆಗಳು, ಮಿಥುನ ಶಿಲ್ಪಗಳು, ರಾಮಾಯಣ–ಮಹಾಭಾರತ ಕಥಾಪಟ್ಟಿಕೆ ಮತ್ತಿತರ ಚಿತ್ರಗಳನ್ನು ಕೃತಿಯಲ್ಲಿ ಕೊಡಲಾಗಿದೆ.
©2024 Book Brahma Private Limited.