ಕುವೆಂಪು ಅವರ ಐತಿಹಾಸಿಕ ಹಾಗೂ ವಿಶೇಷವಾದ ಮಾಹಿತಿಯನ್ನು ಈ ಕೃತಿಯು ಒಳಗೊಂಡಿದೆ. ಮೈಸೂರಿನ ಹೆಸರಾಂತ ವನ್ಯ ಛಾಯಾಗ್ರಾಹಕ ಜೀವಿ ಕೃಪಕರ ಸೇನಾನಿ ಅವರು ಅಪರೂಪದ ಚಿತ್ರಗಳನ್ನು ದಾಖಲಿಸಿದ್ದಾರೆ. 'ಸಾವಿರ ವರ್ಷಗಳ ಮಗು' ಎನ್ನುವುದು ಗೊಮ್ಮಟನ ಕುರಿತು ಕವಿಬಣ್ಣನೆ. ಇಲ್ಲಿರುವುದು ಗೊಮ್ಮಟನಷ್ಟೇ ಉನ್ನತ ವ್ಯಕ್ತಿತ್ವದ ತೊಂಬತ್ತು ದಾಟಿದ ಮಗು. ಪಟ ತೆಗೆದವರೂ ಸಾಮಾನ್ಯರಲ್ಲ. ನಾಡಿಗಿಂತಲೂ ಕಾಡಿನ ಬಗ್ಗೆಯೇ ಹೆಚ್ಚು ಸೆಳೆತವುಳ್ಳವರು, ಅಂತರರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕರು, ನಡವಳಿಕೆಯಲ್ಲಿ 'ಮಗುತನ ಉಳಿಸಿಕೊಂಡವರು. ಕುವೆಂಪು ಅವರ ಕುರಿತ ಚಿತ್ರಸಂಪುಟ ಮಾಡುವ ಕನಸಿನ ಬೆನ್ನತ್ತಿದ ಕೃಪಾಕರ-ಸೇನಾನಿ ಅವರ ಪ್ರಯತ್ನದ ಫಲ, 'ಕ್ಯಾಮರಾ V/s ಕುವೆಂಪು' ಚಿತ್ರಪಟ ಸಂಪುಟ. 1989ರಲ್ಲಿ ನಡೆದ ನೆರಳುಬೆಳಕಿನ ಅನುಸಂಧಾನ, ಮೂರು ದಶಕಗಳ ನಂತರ ಕೃತಿರೂಪದಲ್ಲಿ ಬೆಳಕುಕಂಡಿದೆ. ಆಧುನಿಕ ಕರ್ನಾಟಕದ ಮಹಾನ್ ದಾರ್ಶನಿಕ ಪ್ರತಿಭೆಯೊಂದರ ದೈನಿಕ ಚಿತ್ರಗಳನ್ನು ದಾಖಲಿಸುವ ಪ್ರಾಂಜಲ ಪ್ರಯತ್ನದಂತೆ ಈ ಕೃತಿ ಗಮನಸೆಳೆಯುತ್ತದೆ.
©2024 Book Brahma Private Limited.