ಪತ್ರಕರ್ತರೂ ಆಗಿರುವ, ವನ್ಯಜೀವಿ ಛಾಯಾಗ್ರಹಣದಲ್ಲಿಯೂ ಆಸಕ್ತಿ ಇರುವ ಕವಿ ಶಶಿ ಸಂಪಳ್ಳಿ ಅವರ ಪರಿಸರ ಚಿಂತನೆಗಳ ಸಂಕಲನ ’ಮಲೆಘಟ್ಟ’. ಕಳೆದ ಎರಡು ಮೂರು ದಶಕಗಳಲ್ಲಿ ನಾಗರಿಕತೆಯ ಹಲ್ಲಿಗೆ ಸಿಕ್ಕ ಮಲೆನಾಡನ್ನು ಅವರು ಕೃತಿಯ ಮೂಲಕ ಧ್ಯಾನಿಸಿದ್ದಾರೆ.
ಪಶ್ಚಿಮ ಘಟ್ಟಗಳನ್ನು ಉಳಿಸುವ ಕುರಿತಂತೆ ಬಂದ ಮಾಧವ ಗಾಡ್ಗಿಳ್ ವರದಿ, ಕಸ್ತೂರಿ ರಂಗನ್ ವರದಿಗಳ ಮೂಸೆಯಲ್ಲಿ ಮಲೆನಾಡನ್ನು ಶಶಿ ವಿಶಿಷ್ಟವಾಗಿ ಕಟ್ಟಿಕೊಡುತ್ತಾರೆ. ಅದು ಕಾಡನ್ನು ಉಳಿಸುವ ಕುರಿತಂತೆ ಈ ತಲೆಮಾರಿನವರ ತಳಮಳವೂ ಹೌದು, ಎಚ್ಚರವೂ ಹೌದು.
©2024 Book Brahma Private Limited.