ಬೆಂಗಳೂರು ಎಂಬ ಮಹಾನಗರಿ ಬಾಯಾರಿದ ಹಂತಕ್ಕೆ ಬರುವವರೆಗಿನ ಭೂಗೋಳ, ನಗರವನ್ನು ಆಳಿದ ಕಟ್ಟಿದ ಪಾಳೇಗಾರರ ಮನೆತನಗಳು, ವೈಜ್ಞಾನಿಕ ಇತಿಹಾಸ ಮುಂತಾದ ಎಲ್ಲ ಸಮಾಜ ವಿಜ್ಞಾನದ ಆಯಾಮಗಳನ್ನು ಅಂಕಿ ಅಂಶ, ನಕ್ಷೆಗಳ ಸಹಿತ ವಿವರಿಸಲಾಗಿದೆ.
ಬಾಯಾರಿದ ಬೆಂಗಳೂರು ಲೇಖಕರು: ಟಿ.ಎಂ.ಶಿವಶಂಕರ ಪ್ರಕಾಶಕರು: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು. ದೂರವಾಣಿ: 22107704 ಪುಟಗಳು: 208+8 ಬೆಲೆ:₹175 ಸೃಷ್ಟಿಗೆ ಮೂಲ ಘಟಕಗಳಾಗಿ ಕಂಡುಕೊಂಡ ಪಂಚ ಮಹಾಭೂತಗಳ ಪಂಕ್ತಿಯಲ್ಲಿ ನೆಲಕ್ಕೆ ಮೊದಲ ಸ್ಥಾನವಾದರೆ, ಜಲಕ್ಕೆ ಮೂರನೇ ಸ್ಥಾನ ಎಂಬತೆ ಬಾಯಾರಿದ ಬೆಂಗಳೂರು ಎಂಬ ಪುಸ್ತಕವನ್ನು ಟಿ.ಎಂ.ಶಿವಶಂಕರ್ ಲೇಖಕರಾಗಿ ಹೋರ ತಂದಿದ್ದಾರೆ. ಈ ಪುಸ್ತಕದಲ್ಲಿ ಲೇಖಕರು ಬೇಂಗಳೂರಿನ ಇತಿಹಾಸವನ್ನು ಮತ್ತು ಬೆಳೆದು ಬಂದ ರೀತಿಯನ್ನು ಹಾಗೇಯೇ ಬೆಂಗಳೂರಿನ ಕೆರಗಳು ಯಾವ ರೀತಿಯಲ್ಲಿ ರೂಪುಗೊಂಡಿದ್ದು ಜಲಮಂಡಳಿಯು ನೀರುನ್ನು ಪೂರೈಸುವಲ್ಲಿ ಹೇಗೆ ಪಾತ್ರ ವಹಿಸುತ್ತಿದೆ ಎಲ್ಲೆಲ್ಲಿಂದ ನೀರನ್ನು ಬೆಂಗಳೂರಿಗೆ ಪೂರೈಸುತ್ತಿದೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಈ ಪುಸ್ತಕವು 20 ಅಧ್ಯಾಯ ಅಥವಾ ಸಂಗತಿಗಳನ್ನು ಒಳಗೊಂಡಿದ್ದು ಅದರಲ್ಲಿ ಸದಾ ಬಾಯಾರಿದ ನಗರ ಎಂಬ ಸಂಗತಿಯಲ್ಲಿ ನೀರಿನ ಮಹತ್ವವನ್ನು ಮತ್ತು ಜಲದ ವಿತರಣೆಯನ್ನು ಮತ್ತು ಜಲ ಎಷ್ಟು ಪ್ರಮಾಣದಲ್ಲಿ ನಮಗೆ ಸಿಗುತ್ತಿದೆ ಇಂಬುದನ್ನು ಈ ಒಣದು ಸಂಗತಿಯಲ್ಲಿ ಲೇಖಕರು ವಿವಿರಿಸಿದ್ದಾರೆ. ಬೆಂಗಳೂರಿನಲ್ಲಿ ಬದುಕುತ್ತಿರು ಪ್ರತಿಯೋಬ್ಬರಿಗೂ ಪುಸ್ತಕವು ಸಹಕಾರಿಯಾಗಿದೆ.
ಕೃಪೆ: ಪ್ರಜಾವಾಣಿ
https://www.prajavani.net/artculture/book-review/pustaka-vimarse-647658.html
©2024 Book Brahma Private Limited.