ಕೆರೆಗಳು ಬತ್ತಿದಾಗ ಜಲಸಮಸ್ಯೆ

Author : ಟಿ. ಆರ್. ಅನಂತರಾಮು

Pages 64

₹ 45.00




Year of Publication: 2010
Published by: ಉದಯಭಾನು ಉನ್ನತ ಶಿಕ್ಷಣ ಕೇಂದ್ರ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಟಿ. ಆರ್‌. ಅನಂತರಾಮು ವೃತ್ತಿಯಲ್ಲಿ ಭೂವಿಜ್ಞಾನಿ, ಪ್ರವೃತ್ತಿಯಲ್ಲಿ ಜನಪ್ರಿಯ ವಿಜ್ಞಾನ ಲೇಖಕರು. ಬೆಂಗಳೂರಿನ ಸುತ್ತಮುತ್ತಲಿನ ಕೆರೆಗಳ ಬಗ್ಗೆ ಅಧ್ಯಯನ ಮಾಡಿರುವ ಇವರು ಕೆರೆಗಳು ಬತ್ತಿಹೋದರೆ ಮುಂದೆ ಉಂಟಾಗುವ ಸಮಸ್ಯೆಗಳ ಕುರಿತು ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. ಅಪರೂಪದ ಛಾಯಾಚಿತ್ರಗಳು ಕೆರೆಗಳ ಸದ್ಯದ ಸ್ಥಿತಿಗತಿ ಹೇಳುತ್ತಿವೆ. ಕೆರೆಗಳನ್ನು ನಿರ್ವಹಿಸಲು ಪ್ರತ್ಯೇಕ ಇಲಾಖೆ ನಿರ್ಮಾಣವಾಗಬೇಕು ಎಂಬಂತಹ ಹಲವು ಸಲಹೆಗಳೂ ಕೃತಿಯಲ್ಲಿವೆ. 

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books