ಲೇಖಕರಾದ ಶ್ರೀನಿವಾಸ ಚಕ್ರವರ್ತಿ ಹಾಗೂ ಎಂ.ಎಲ್. ರಾಘವೇಂದ್ರ ರಾವ್ ಅವರು ಜಂಟಿಯಾಗಿ ರಚಿಸಿದ ಕೃತಿ-ಭೂಮಿ ನಂತರ ನಮ್ಮ ನೆಲೆ ಎಲ್ಲಿ?. ಇದು ಮನುಕುಲಕ್ಕೆ ಕಾಡುತ್ತಿರುವ ಪ್ರಶ್ನೆ ಎಂಬುದಾಗಿ ಲೇಖಕರು ಈ ಕೃತಿಗೆ ಉಪಶೀರ್ಷಿಕೆ ನೀಡಿದ್ದು, ಭೂಮಿಯನ್ನು ಎಷ್ಟು ಸಾಧ್ಯವೋ ಅಷ್ಟನ್ನೂ ದುರುಪಯೋಗಪಡಿಸಿಕೊಂಡಿರುವ ಎಲ್ಲ ಚಿತ್ರಣಗಳನ್ನು ನೀಡುವ ಮೂಲಕ, ಬದುಕಲು ಭೂಮಿಯನ್ನು ಅಯೋಗ್ಯವಾಗಿಸಿದ ಮೇಲೆ ಮತ್ತೆಲ್ಲಿ ಹೊರಡುವುದು ಎಂಬ ಪ್ರಶ್ನೆಯು ಪರಿಸರ ವಿನಾಶದ ಎಚ್ಚರಿಕೆಯನ್ನು ನೀಡಿದ್ದಾರೆ. ಭೂಮಿಯ ವಿನಾಶ ಮಾತ್ರವಲ್ಲ; ಇಡೀ ಮನುಕುಲದ ನಾಶವೇ ಎಂದು ಲೇಖಕರು ಅರ್ಥೈಸಿದ್ದಾರೆ. ಇರುವ ಭೂಮಿಯನ್ನು ಸ್ವಚ್ಛವಾಗಿರಿಸಿಕೊಂಡು ಮನುಕುಲದ ವಿನಾಶ ತಡೆಯಬಹುದೆಂದೂ ಇಲ್ಲಿಯ ವಿಚಾರಗಳು ಓದುಗರನ್ನು ಎಚ್ಚರಿಸುತ್ತವೆ.
©2024 Book Brahma Private Limited.