ಅರಣ್ಯ ನೀತಿಯಿಂದ ಬಳಲುತ್ತಿರುವ ಬುಡಕಟ್ಟು ಜನರು, ಕೃಷಿ ನೀತಿಯಿಂದ ಆತ್ಮಹತ್ಯೆಗೀಡಾಗುತ್ತಿರುವ ರೈತರು, ಡೀಸೆಲ್ ತೆರಿಗೆಯ ದುರುಪಯೋಗದಿಂದ ಆಗುವ ಪರಿಸರ ಮಾಲಿನ್ಯ, ಗೋ ಉದ್ಯಮದ ಹಿಂದಿರುವ ರಾಜಕೀಯ, ಕೃಷಿಯಲ್ಲಿರುವ ಬಡಜನರ ಸಾಂಪ್ರದಾಯಿಕ ವಿವೇಕ, ನದಿಗಳು ಮತ್ತು ಅದನ್ನು ಅವಲಂಬಿಸಿದ ಜನರು, ಹೀಗೆ ಪರಿಸರದ ಚರ್ಚೆ ವಿಸ್ತಾರವಾಗುತ್ತಾ ಅದು ಪ್ರಭುತ್ವ ಮತ್ತು ಜನರ ನಡುವಿನ ಸಂಘರ್ಷವಾಗಿ ಹೇಗೆ ನಮ್ಮ ಮುಂದಿದೆ ಎನ್ನುವುದನ್ನು ಈ ಕೃತಿ ತೆರೆದಿಡುತ್ತದೆ. ಪರಿಸರದ ಕುರಿತಂತೆ ಹೊಸತೊಂದು ಒಳನೋಟವನ್ನು ನಿಮಗೆ ಈ ಕೃತಿ ನೀಡುವುದರಲ್ಲಿ ಅನುಮಾನವಿಲ್ಲ. ಈ ಹಿನ್ನಲೆಯಲ್ಲೇ, ಈ ಕೃತಿ ಏಕ ಕಾಲದಲ್ಲಿ ಹಲವು ಕ್ಷೇತ್ರಗಳ ಜನರ ಆಸಕ್ತಿಯನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಈ ಕೃತಿಯಲ್ಲಿ ಒಟ್ಟು 28 ಲೇಖನಗಳಿವೆ.
©2024 Book Brahma Private Limited.