’ಮಾಟದೊಳಗಣ ನೋಟ’ ಶಿವಾನಂದ ಎಚ್. ಬಂಟನೂರು ಅವರು ಭಾರತೀಯ ಶಿಲ್ಪಕಲೆಯ ಕುರಿತು ಬರೆದ ಕೃತಿ. ವಿಭಿನ್ನ ಮಾಧ್ಯಮಗಳ ಶಿಲ್ಪಕಲೆಗಳು ಭಾರತೀಯ ಸಂಸ್ಕೃತಿಯ ಅವಿಸ್ಮರಣೀಯ ಕುರುಹುಗಳು. ಹಾಗಾಗಿ ಸಮಕಾಲೀನ ದಿನಗಳಲ್ಲಿಯೂ ಸಾಂಪ್ರದಾಯಿಕ ಶಿಲ್ಪ ಕಲೆಗಳ ಬಗೆಗೆ ಪ್ರೀತಿ, ಆರಾಧನಾಭಾವ ಉಳಿದುಕೊಂಡಿದೆ. ಸಾಂಪ್ರದಾಯಿಕ ಶಿಲ್ಪ ಕಲೆಗಳ ರಚನಾ ವಿಧಾನ, ಹಿನ್ನೆಲೆ, ಅರ್ಥ, ಸ್ವರೂಪ ಇವುಗಳನ್ನು ಉಳಿಸಿಕೊಂಡು ಬಂದಿರುವ ಮನುಷ್ಯನ ನಂಬಿಕೆಗಳು ಇತ್ಯಾದಿಗಳೆಲ್ಲ “ಮಾಟದೊಳಗಣ ನೋಟ” ಪುಸ್ತಕದ ಲೇಖನಗಳಲ್ಲಿ ದಾಖಲಾಗಿವೆ.
©2025 Book Brahma Private Limited.