ಉತ್ತರ ಕರ್ನಾಟಕದ ಜನಪದ ಶಿಲ್ಪಕಲೆಯ ಪರಂಪರೆಯ ವಿಸ್ತೃತವಾದ ಅಧ್ಯಯನ ಪ್ರಬಂಧದಲ್ಲಿದೆ. ಮಣ್ಣು, ಕಲ್ಲು, ಕಟ್ಟಿಗೆ, ಲೋಹ ಮಾಧ್ಯಮಗಳಲ್ಲಿ ವ್ಯಕ್ತಗೊಂಡಿರುವ ಶಿಲ್ಪಕಲೆಯ ವೈವಿಧ್ಯತೆಯನ್ನು ಸಂಶೋಧಕರು ಕೃತಿಯಲ್ಲಿ ಚರ್ಚಿಸಿದ್ದಾರೆ. ಪ್ರತಿಯೊಂದು ಶಿಲ್ಪದ ಮಾಧ್ಯಮ, ರಚನೆ ಆಕಾರ, ವೈಶಿಷ್ಟ್ಯಗಳನ್ನು ವಿವರಿಸುವುದರೊಂದಿಗೆ ಅವುಗಳಿಗಿರುವ ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಮಹತ್ವ ಹಾಗೂ ದೈವತ್ವದ ಪರಿಕಲ್ಪನೆಗಳನ್ನು, ಆ ಶಿಲ್ಪದ ಸುತ್ತ ಹೆಣೆದುಕೊಂಡಿರುವ ನಂಬಿಕೆ-ಹಾಡು-ಆಚರನೆಗಳನ್ನು ಲೇಖಕರು ವಿಶಿಷ್ಟ ರೀತಿಯಲ್ಲಿ ಪರಿಶೀಲಿಸಿದ್ದಾರೆ. ಕೃತಿ ಜನಪದ ಶಿಲ್ಪಕಲೆ ಮತ್ತು ಸಂಸ್ಕೃತಿಗಳ ಸಮೀಕ್ಷಾ ವರದಿಯಂತಿದ್ದು, ಅಧ್ಯಾಯನಾಸಕ್ತರಿಗೆ ಉಪಯುಕ್ತ ಗ್ರಂಥ.
©2024 Book Brahma Private Limited.