’ಇನ್ ಸ್ಟಾಲೇಷನ್ ಕಲಾ ಪ್ರಪಂಚ’ ಪುಸ್ತಕದ ಕರ್ತೃ ಕೆ.ವಿ. ಸುಬ್ರಹ್ಮಣ್ಯಂ ಸ್ವತಃ ಕಲಾವಿದರಾಗಿದ್ದು ಕಲಾ ಜೀವನ-ಸಾಧನೆಗಳನ್ನು ಮತ್ತು ಕಲಾವಿದರ ಜಗತ್ತನ್ನು ಅರಿತವರು. ಕಲಾ ಇತಿಹಾಸದ ಅಧ್ಯಯನ, ಇನ್ ಸ್ಟಾಲೇಷನ್ ಕಲಾ ಪ್ರಕಾರಗಳ ಮತ್ತು, ಅಭಿವ್ಯಕ್ತಿಗಳ ಅನುಭವಕ್ಕಾಗಿ ಬಳಸಿಕೊಂಡಂತಹ ಕಲಾ ಪ್ರಕಾರಕ್ಕೆ ಅನನ್ಯ ಕೊಡುಗೆಯನ್ನು ಪುಸ್ತಕದಲ್ಲಿ ನೀಡಿದ್ದಾರೆ. ದೃಶ್ಯಕಲೆ-ಚಿತ್ರಕಲೆಯ ಕಲಾವಿದರ ಅಭಿವ್ಯಕ್ತಿ ರೂಪಗಳನ್ನು ಸಾಮಾನ್ಯವಾಗಿ ಎಲ್ಲರಿಗೂ ತಲುಪಿಸುವ, ಕಲಾ ಪ್ರಪಂಚದ ಬಗ್ಗೆ ಆಸಕ್ತಿ ಹೆಚ್ಚಿಸುವ ದೊಡ್ಡ ಪ್ರಯತ್ನ ಈ ಹೊತ್ತಿಗೆಯಲ್ಲಿ ಸಫಲವಾಗಿದೆ.
©2025 Book Brahma Private Limited.