‘ಕಲ್ಯಾಣ ಚಾಲುಕ್ಯ ಶಿಲ್ಪಕಲೆ’ ನೃತ್ಯ ಇತಿಹಾಸ ತಜ್ಞೆ ಕರುಣಾ ವಿಜಯೇಂದ್ರ ಅವರು ರಚಿಸಿರುವ ಕೃತಿ. ಹಿರಿಯ ಲೇಖಕರಾದ ಎಚ್. ಎಸ್. ಗೋಪಾಲ ರಾವ್ ಅವರು ಈ ಕೃತಿಯ ಸಂಪಾದಕರಾಗಿದ್ದಾರೆ. ಕೃತಿಯಲ್ಲಿ ಕಲ್ಯಾಣ ಚಾಲುಕ್ಯರ ರಾಜಕೀಯ ಇತಿಹಾಸ, ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳು, ಶಿಲೆ ಮತ್ತು ಸ್ವರೂಪ, ದೇವಾಲಯಗಳಲ್ಲಿನ ಶಿಲ್ಪಗಳು, ಶಿಲ್ಪಗಳ ವೈಶಿಷ್ಟ್ಯ, ಸ್ಮಾರಕ ಶಿಲ್ಪಗಳು, ಕಲ್ಯಾಣ ಚಾಲುಕ್ಯರ ಕಾಲದ ಶಿಲ್ಪಗಳು, ಸೇರಿದಂತೆ ಕಲ್ಯಾಣ ಚಾಲುಕ್ಯರ ಕಾಲಘಟ್ಟದ ಕಲಾ ಇತಿಹಾಸವನ್ನು ವಿವರಿಸುವ ಹಲವಾರು ಲೇಖನಗಳಿವೆ.
©2025 Book Brahma Private Limited.