ಕರ್ನಾಟಕ ಶಿಲ್ಪಕಲೆಗೆ ವಿಶ್ವದಲ್ಲೇ ಹೆಸರು ಪಡೆದಿದೆ. ಶಿಲ್ಪಕಲೆಯ ತವರೂರು ಎಂದೇ ಕರೆಯಲ್ಪಡುತ್ತದೆ. ಇಂತಹ ಶಿಲ್ಪಕಲೆಗಾಗಿ ಸಾವಿರಾರು ಕಲಾವಿದರು ಶ್ರಮಿಸಿದ್ದಾರೆ. ಅಂತಹ ಕಲಾವಿದರನ್ನು ಗುರುತಿಸಿ, ಸಾಂಪ್ರದಾಯಿಕ ಶಿಲ್ಪಕಲೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ , ಕರ್ನಾಟಕ ಶಿಲ್ಪಕಲಾ ಅಕಾಡೆಮಿ ನಿರ್ಧರಿಸಿತ್ತು. ಈ ಯೋಜನೆಯ ಸಲುವಾಗಿ ‘ಶಿಲ್ಪ ಕಲಾವಿದರ ಮಾಲೆ’ ಹೆಸರಿನಲ್ಲಿ ಕಲಾವಿದರ, ಅವರ ಕೃತಿಗಳ ಕುರಿತಾದ ಪುಸ್ತಕಗಳನ್ನು ಪ್ರಕಟಿಸಿತು. ಈ ಯೋಜನೆಯ ಭಾಗವಾಗಿ ರಚನೆಯಾದ ಕೃತಿ ‘ಶಿಲ್ಪಕಲಾ ಆರಾಧಕರು’. ಕರ್ನಾಟಕದ ವಿವಿಧ ಶಿಲ್ಪಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.
©2025 Book Brahma Private Limited.