ಭಾರತೀಯ ಶಿಲ್ಪಕಲೆ

Author : ಎನ್. ಮರಿಶಾಮಾಚಾರ್

Pages 119

₹ 50.00




Year of Publication: 2010
Published by: ಕರ್ನಾಟಕ ಶಿಲ್ಪಕಲಾ ಅಕಾಡೆಮಿ
Address: ಮೇಲ್ಮನೆ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು –560002

Synopsys

ಭಾರತ ಶಿಲ್ಪಕಲೆಗೆ ವಿಶ್ವದಲ್ಲೇ ಹೆಸರು ಪಡೆದಿದೆ. ಶಿಲ್ಪಕಲೆಯ ತವರೂರು ಎಂದೇ ಕರೆಯಲ್ಪಡುತ್ತದೆ. ಇಂತಹ ಶಿಲ್ಪಕಲೆಗಾಗಿ ಸಾವಿರಾರು ಕಲಾವಿದರು ಶ್ರಮಿಸಿದ್ದಾರೆ. ಅಂತಹ ಕಲಾವಿದರನ್ನು ಗುರುತಿಸಿ, ಸಾಂಪ್ರದಾಯಿಕ ಶಿಲ್ಪಕಲೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ , ಕರ್ನಾಟಕ ಶಿಲ್ಪಕಲಾ ಅಕಾಡೆಮಿ ನಿರ್ಧರಿಸಿತ್ತು. ಈ ಯೋಜನೆಯ ಸಲುವಾಗಿ ‘ಶಿಲ್ಪ ಕಲಾವಿದರ ಮಾಲೆ’ ಹೆಸರಿನಲ್ಲಿ ಕಲಾವಿದರ, ಅವರ ಕೃತಿಗಳ ಕುರಿತಾದ ಪುಸ್ತಕಗಳನ್ನು ಪ್ರಕಟಿಸಿತು. ಈ ಯೋಜನೆಯ ಭಾಗವಾಗಿ ರಚನೆಯಾದ ಕೃತಿ ‘ಭಾರತೀಯ ಶಿಲ್ಪಕಲೆ’. ಭಾರತೀಯ ಶಿಲ್ಪಕಲೆ ಮತ್ತು ಶಿಲ್ಪಿಗಳ ಸಂಕ್ಷಿಪ್ತ ಪರಿಚಯ ಇಲ್ಲಿ ಸಿಗುತ್ತದೆ.

About the Author

ಎನ್. ಮರಿಶಾಮಾಚಾರ್
(15 May 1951 - 03 April 2013)

ಕರ್ನಾಟಕದ ಕಲಾವಲಯದ ಹಿರಿಯರು ’ಮರಿ’ ಎಂದು ಕರೆಯುತ್ತಿದ್ದ ಎನ್. ಮರಿಶಾಮಾಚಾರ್‌ ಅವರು ರಾಜ್ಯದ ಅಪರೂಪದ ಕಲಾಪರಿಚಾರಕ-ಲೇಖಕ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್‌  ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮರಿಶಾಮಾಚಾರ್‌ ಅವರು ಕಲಾಸಾಹಿತಿ. ’ನಡೆದಾಡುವ ಕಲಾಕೋಶ’ ಎಂದು ಕಲಾವಲಯದಲ್ಲಿ ಅವರನ್ನು ಗುರುತಿಸಲಾಗುತ್ತಿತ್ತು. ವಿಜಯಪುರದಲ್ಲಿ 1951ರ ಮೇ 15ರಂದು ಜನಿಸಿದ ಮರಿಶಾಮಾಚಾರ್‌ ಅವರು ಜಯನಗರದ ಆರ್‌.ವಿ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ಡ್ರಾಯಿಂಗ್ ಮಾಡಲು ಆರಂಭಿಸಿದ್ದರು. ಅವರ ಅಣ್ಣ ಕೆನ್‌ ಶಾಲೆಯ ವಿದ್ಯಾರ್ಥಿಯಾಗಿದ್ದ. ಕಲೆಯ ಅಭಿರುಚಿ ಬಂದದ್ದು ಅವರ ಅಣ್ಣನಿಂದಲೇ. ಅಣ್ಣನ ಮೂಲಕ ಪರಿಚಯವಾದ ಕಲಾಗುರು ಆರ್‌.ಎಂ. ಹಡಪದ ಅವರ ಶಿಷ್ಯರಾಗಿದ್ದ ’ಮರಿ’ ಅವರು ಅವರ ಬಳಿ ಐದು ವರ್ಷ ...

READ MORE

Related Books