ಲೇಖಕ ನಿಂಗನಗೌಡ.ಹ.ದೇಸಾಯಿ (ಹನಿ) ಅವರ ತ್ರಿಪದಿಗಳ ಸಂಗ್ರಹ ಕೃತಿ ಜಾನಪದ ಸೌರಭ. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ಪ್ರಾಧ್ಯಾಪಕರಾಗಿರುವ ಜಯಶ್ರಿ ದಂಡೆ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಈ ಕೃತಿಯಲ್ಲಿ ಪರಸನಹಳ್ಳಿಯ ಸೂಗಮ್ಮ ಹಾಗೂ ಕಮಲಮ್ಮ ಅವರು ಹಾಡಿದ ಜಾನಪದ ತ್ರಿಪದಿಗಳಿವೆ. ಕುತೂಹಲದಿಂದ ಸೂಗಮ್ಮ ಹಾಗೂ ಕಮಲಮ್ಮ ಅಜ್ಜಿಯ ಹತ್ತಿರ ಹೋಗಿ ಅವರ ಎದೆ ತುಂಬ ತುಂಬಿದ ಹಾಡುಗಳನ್ನು ಸಂಗ್ರಹಿಸಿಕೊಂಡು ಬಂದುದರ ಫಲವೇ ಈ ಕೃತಿ. ಸೂಗಮ್ಮ ಅವರು ಹಾಡಿದ 142 ಹಾಗೂ ಕಮಲಮ್ಮ ಅವರು ಹಾಡಿದ 10 ತ್ರಿಪದಿಗಳಿವೆ. ಎಲ್ಲ ತ್ರಿಪದಿಗಳು ಅವರು ನೆಲೆಸಿದ ಊರಿನ ಪರಿಸರದ ಸುತ್ತ ಆಗಿ ಹೋದ ಮಹಾನುಭಾವರ ದೇವಾನುದೇವತೆಗಳ ಸ್ತುತಿ ಆಗಿರುವುದು ವಿಶೇಷ ಎಂಬುದಾಗಿ ಹೇಳಿದ್ದಾರೆ.
©2025 Book Brahma Private Limited.