ಕವಿ ಜೀವರಾಜ ಹ ಛತ್ರದ ಅವರ ಕವನ ಸಂಕಲನ- ’ಜೀವಣ್ಣನ ಆಧುನಿಕ ತ್ರಿಪದಿಗಳು’.ಇಲ್ಲಿಯ ತ್ರಿಪದಿಗಳಲ್ಲಿ ಎದ್ದು ಕಾಣುವ ವಸ್ತು ವಿಷಯವೆಂದರೆ ಪ್ರಧಾನವಾಗಿ ಆಧುನಿಕತೆ , ಆಧುನಿಕತೆಯ ಶಿಸ್ತು ಆಗಿ ಬೆಳೆಯುತ್ತಿರುವ ತೀವ್ರವಾದ ಯಾಂತ್ರಿಕತೆ, ತನ್ನ ಕಬಂಧ ಬಾಹುಗಳಲ್ಲಿ ಜೀವನದ ವಿವಿಧ ಮಜಲು ಮಗ್ಗುಲಗಳನ್ನು ಹಿಡಿದು ಹೇಗೆ ಹಿಚುಕುತ್ತಿದೆ ಎಂಬುದನ್ನು ಕವಿಯು ಮನಂಬುಗುವಂತೆ ಕಟ್ಟಿಕೊಟ್ಟಿದ್ದಾರೆ. ನಗರದ ಬದುಕು ತೀವ್ರ ಆಧುನಿಕತೆಯನ್ನು ತಬ್ಬಿಕೊಂಡು ಬಡವಾಗಿದೆ. ರೈತ ಸಾವಯವ ಕೃಷಿಯನ್ನು, ಹೈನುಗಾರಿಕೆಯನ್ನು, ಶ್ರಮ ಸಂಸ್ಕೃತಿಯನ್ನು ಮರೆತು ಶಾರೀರಕವಾಗಿಯೂ ಅಶಕ್ತನಾಗಿದ್ದಾನೆ ಎಂಬುದನ್ನು ಅನೇಕ ತ್ರಿಪದಿಗಳು ದಾಖಲಿಸುತ್ತವೆ. ಕವಿಯು ಗುರುವನ್ನು ಗಿರಿಧಾಮಕ್ಕೆ ಹೋಲಿಸುವುದರ ಮೂಲಕ ಬದುಕಿನ ಬೇಗೆಗೆ ಗುರುವು ಹೇಗೆ ತಂಪೆರೆದು ತಣಿಸಬಲ್ಲ ಹಾಗೂ ಬದುಕಿನಲ್ಲಿ ಬಂದೊದಗುವ ಸುಖ- ಸಂಪತ್ತು- ಸಂತಸಗಳೆಲ್ಲಾ ಗುರುವಿನ ಕೃಪೆ ಎಂಬುದನ್ನು ಗುರುವಿನ ಮಹತಿಯನ್ನು ಸಾರುವ ಅನೇಕ ತ್ರಿಪದಿಗಳು ಇಲ್ಲಿವೆ.
©2025 Book Brahma Private Limited.