`ಅಲೆಯ ಆಲಾಪ’ ಕೃತಿಯು ಜಿ.ಆರ್. ಪರಿಮಳಾರಾವ್ ಅವರ ತ್ರಿಪದಿಗಳಾಗಿವೆ. ಕೃತಿಗೆ ಬೆನ್ನುಡಿ ಬರೆದಿರುವ ಪ್ರೇಮಾಭಟ್ ಅವರು, ಪರಿಮಳಾರಾವ್ ಅವರ ಕಾವ್ಯ ಅಭಿರುಚಿ ಸಾಗಿರುವ ಜಾಡನ್ನು ಗಮನಿಸಿದಾಗ ಆಶ್ಚರ್ಯವಾಗುತ್ತದೆ. ಅವರ ಈ ಪುಸ್ತಕದಲ್ಲಿ ಮೂರು ಸಾಲಿನ ತ್ರಿಪದಿಗಳು ಹಾಗೂ ವಿಶೀಷ್ಟವೆನ್ನಿಸುವ ಜಪಾನಿ ಮಾದರಿಯ ಹೈಕುಗಳಿವೆ. ಇವರ ಕಾವ್ಯ ಶೈಲಿ ವಿನೂತನ ಹಾಗೂ ಗಂಭೀರ. ಬದುಕಿನ ಬಗೆಗೆ ಇವರು ಇರಿಸಿಕೊಂಡಿರುವ ಪ್ರೀತಿ ಅನನ್ಯ. ಕವಿತೆ ಕವಯಿತ್ರಿಯ ಸಂಸ್ಕಾರದ ಪರಿಪಾಕ. ಕವಯಿತ್ರಿಗೆ ನಿಷ್ಠೆ ಇದೆ. ಶ್ರದ್ಧೆ ಇದೆ. ಇದು ಅನಾವರಣಗೊಳ್ಳುವುದು ಬರಹದ ನುಡಿಯಲ್ಲಿರುವ ಸಂಯಮದಲ್ಲಿ. ಈ ಸಂಕಲನದಲ್ಲಿರುವ ಹಲವು ತ್ರಿಪದಿಗಳು ಅದರಲ್ಲೂ ಹೈಕುಗಳು ಒಂದು ಅವ್ಯಕ್ತ ನೆಲೆಯಲ್ಲಿ ನಿಂತು ಗಮನವನ್ನು ಸೆಳೆಯುತ್ತದೆ. ಮಾಗಿದ ಮನದಲ್ಲಿ ಭಾವತುಂಬಿದ ನಾದದ ಬಳಕು ಕವನಗಳಲ್ಲಿ ಹಾಸು ಹೊಕ್ಕು ಗ್ರಹಸ್ಥ ಜೀವನದಾಚೆಗೂ ಪಯಣಿಸುತ್ತದೆ. ಬಿರಿದರಳಿದ ಮಲ್ಲಿಗೆಯಂತೆ, ತೆರೆದ ಹೃದಯದಂತೆ ವೀಣೆಯ ನಿನಾದದಂತೆ ಅತ್ಯಂತ ಸಹಜವಾಗಿ ಅಭಿವ್ಯಕ್ತಿಗೊಂಡಿದೆ ಎಂದಿದ್ದಾರೆ.
©2025 Book Brahma Private Limited.